
ಲೇಖಕಿ ರೇಶ್ಮಾ ಭಟ್ ಅವರ ಪ್ರಬಂಧಗಳ ಸಂಕಲನ-ನವೆ ನವೋನ್ಮೇಷ ಶಾಲಿನೀ. ಗೊರಕೋಪಾಖ್ಯಾನ, ಹೌ ಟು ಬಿಕಂ ಟೆನ್ಷನ್ ಫ್ರೀ, ಮನೆ ಹರಟೆ, ಯೋಗನಿದ್ರೆ, ಹಾದಿ ಪುರಾಣ, ಒಂದು ಸುಂದರ ದಿನದ ನಿರೀಕ್ಷೆಯಲ್ಲಿ, ಅದ್ಭುತ ನಾಮಾಯಣ, ಉಪ್ಪಿಟ್ಟಿಗೆ ಜಯವಾಗಲಿ ಹೀಗೆ ಒಟ್ಟು 19 ಪ್ರಬಂಧಗಳ ಸಂಕಲನವಿದು.
ಸಾಹಿತಿ ಬಿ.ಎಂ. ರೋಹಿಣಿ ಕುಡುಪು ಅವರು ಮುನ್ನುಡಿ ಬರೆದು ‘ಅಡುಗೆ ಮನೆಯೊಳಗಿನ ಸಣ್ಣ ಕಿಟಕಿಯಿಂದಲೇ ವಿಶ್ವದರ್ಶನ ಮಾಡಿಸುವ ಜಾದೂ ಕಲೆಯಲ್ಲಿ ಲೇಖಕಿ ಪಳಗಿದ್ದಾಳೆ. ಇಲ್ಲಿ ರಾಜಕೀಯ ವಿಡಂಬನೆಗಳಿವೆ. ವೃತ್ತಿ ಬದುಕಿನ ಬೋಳೆತನ, ಶ್ಯಾಣಾತನಗಳಿವೆ. ಸಮಾಜ ವಿಜ್ಞಾನವಿದೆ. ಸಮಾಜಮುಖಿಯಾದ ಜೀವಪರ ಚಿಂತನೆಗಳಿವೆ. ಬರಹದ ಶೈಲಿ ನವಿರಾಗಿದೆ. ಮನುಷ್ಯರ ಅಂತರಂಗದ ತುಡಿತಗಳು, ಸಣ್ಣತನಗಳು, ಗರ್ವ, ಅಹಂಕಾರ ಹೀಗೆ ಸಕಲ ವಿಷಯ ವಸ್ತುಗಳೂ ಸಲಲಿತವಾದ ಪ್ರಬಂಧಗಳಾಗಿ ರೂಪುಗೊಂಡಿವೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.