
ಲೇಖಕ ಎಸ್. ದಿವಾಕರ್ ಅವರ ಪ್ರಬಂಧ ಕೃತಿ ʻಪ್ರಪಂಚ ಪುಸ್ತಕʼ. ಕಳೆದ ಕೆಲವು ಶತಮಾನಗಳಿಂದ ಸಾಹಿತ್ಯ ಲೋಕದಲ್ಲಿ ಬಂದ ಅಸಾಮಾನ್ಯವೆನಿಸುವ ಸಾಹಿತ್ಯ ಕೃತಿಗಳು ಹಲವಾರು. ಅಂತಹ ಸಾಹಿತ್ಯ ಕೃತಿಗಳಲ್ಲಿ ಲೇಖಕರು ಓದಿದ ಕೃತಿಗಳು ಹಾಗೂ ಅವುಗಳ ಲೇಖಕರ ಕುರಿತಾಗಿ ರಚಿಸಿರುವ ಪ್ರಬಂಧಗಳು ಈ ಪುಸ್ತಕದಲ್ಲಿದೆ. ಇಲ್ಲಿ ಆಯ್ಕೆಮಾಡಿಕೊಂಡ ಲೇಖಕರಲ್ಲಿ ಕೆಲವರು ಸಾಹಿತ್ಯ ಕ್ಷೇತ್ರದ ದಿಗ್ಗಜರಾದರೆ ಉಳಿದವರು ನೋಬೆಲ್ ಪ್ರಶಸ್ತಿ ಪುರಸ್ಕೃತರು. ಇವರು ತಮ್ಮ ಪ್ರಯೋಗಶೀಲತೆಯಿಂದ, ಹೊಸ ರೂಪಕಗಳ ಸೃಷ್ಟಿಯಿಂದ ಆಧುನಿಕ ಮನುಷ್ಯನ ಅಂತರಂಗವನ್ನು ಪರಿಶೋಧಿಸಿದ ಕ್ರಮ ಬೆರಗುಮೂಡಿಸುವಂಥದ್ದು. ದಿವಾಕರ್ ಅವರು ಒಬ್ಬ ಅನುವಾದಕರೂ ಆಗಿರುವುದರಿಂದ ಬೇರೆ ಬೇರೆ ಭಾಷೆಗಳ, ಬೇರೆ ಬೇರೆ ಸಂಸ್ಕೃತಿಗಳ ಸಾಹಿತ್ಯ ಕೃತಿಗಳನ್ನು ಸಂಕ್ಷಿಪ್ತವಾಗಿ, ಆದರೆ ಅಷ್ಟೇ ಸಮಗ್ರವಾಗಿ ಪ್ರಬಂಧ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.