
ಈ ಪುಸ್ತಕದಲ್ಲಿ ಸೇರಿರುವ ಪ್ರಬಂಧಗಳ ಪೈಕಿ, 'ಸಂಸ್ಕೃತಿ ಮತ್ತು ಸಾಹಿತ್ಯ', 'ರೊಮ್ಯಾಂಟಿಸಿಸ್ಟ್ ಮತ್ತು ವಾಸ್ತವಿಕತೆ', 'ಸಾಹಿತ್ಯ ವಿಮರ್ಶೆ' - ಇವುಗಳ ಕುರಿತು ಬರೆದ ಲೇಖನಗಳು ಇಲ್ಲಿವೆ. 'ಸಾಹಿತ್ಯವಿಮರ್ಶೆ' ಲೇಖನವು ಲೇಖಕರ ಗುರುಗಳಾದ ಬಿ. ಎಂ. ಶ್ರೀಕಂಠಯ್ಯನವರಿಗೆ ಶಿಷ್ಯರೂ ಮಿತ್ರರೂ ಅರ್ಪಿಸಿದ 'ಸಂಭಾವನೆ' ಎಂಬ ಗ್ರಂಥಕ್ಕಾಗಿ ಬರೆದಿದ್ದು, 'ರೊಮಾಂಟಿ ಸಿಸ್ಟ್ ಮತ್ತು ವಾಸ್ತವಿಕತೆ' ಆಕಾಶವಾಣಿಯವರು ಏರ್ಪಡಿಸಿದ್ದ ಒಂದು ಸೆಮಿನಾರ್‌ಗಾಗಿ ಹಾಗೂ ಸರ್ಕಾರದ ಸಂಸ್ಕೃತಿ ಪ್ರಸಾರದ ಇಲಾಖೆ ಆರಂಭವಾದ ತರುಣದಲ್ಲಿ ಸಂಸ್ಕೃತಿ' ಎಂಬ ಪುಸ್ತಕಕ್ಕೆ ಬರೆದದ್ದಾಗಿದೆ.
©2025 Book Brahma Private Limited.