
‘ಓಪನ್ ಗ್ರೌಂಡ್’ ಕಿಶೋರ ಸಾಹಿತಿ ಅಂತಃಕರಣನ ಕ್ರೀಡಾ ಅಂಕಣ ಪ್ರಬಂಧಗಳ ಸಂಕಲನ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಡಾ. ಕೆ. ಪುಟ್ಟಸ್ವಾಮಿ ಬೆನ್ನುಡಿ ಬರೆದಿದ್ದಾರೆ. ಕೇವಲ ಐದು-ಆರನೇ ತರಗತಿಯಲ್ಲಿ ಓದುತ್ತಿರುವ ಬಾಲಕನೊಬ್ಬ ನುರಿತ ವರದಿಗಾರನಂತೆ ಕ್ರೀಡಾ ಸಾಹಿತ್ಯವನ್ನು ರಚಿಸುತ್ತಿರುವುದು ನಿಜಕ್ಕೂ ಅದ್ಭುತ ಪವಾಡ ಎನ್ನುತ್ತಾರೆ. ಕೆ. ಪುಟ್ಟಸ್ವಾಮಿ.
ಇಲ್ಲಿಯ ಕ್ರೀಡೆಗಳ ಹರಹು ವಿಸ್ತಾರವಾದದ್ದು, ಅದು ಸಾಕರ್, ಕ್ರಿಕೆಟ್, ಹಾಕಿ, ಒಲಿಂಪಿಕ್ಸ್ ಕೂಟ, ವೃತ್ತಿ ಕಬ್ಬಡಿ, ಟೆನಿಸ್ ಮುಂತಾದ ಕ್ರೀಡೆಗಳವರೆಗೆ ವ್ಯಾಪಿಸಿದೆ. ಅಲ್ಲದೆ ಸಮಕಾಲೀನ ಕ್ರೀಡಾಕೂಟಗಳ ಸಮರ್ಥ ದಾಖಲೆಗಳಾಗಿವೆ. ಇಲ್ಲಿಯ ಲೇಖನಗಳ ಹಿಂದ ಇರುವುದು ವರದಿಗಾರನ, ಅಂಕಿ ಅಂಶಗಳ ಕಣಜ ಹೊತ್ತ ಬರಹಗಾರನ ಮನೋಧರ್ಮವಲ್ಲ. ಬದಲಿಗೆ ಆಟದ ರೋಮಾಂಚನ, ಆಟಗಾರರ ಕೌಶಲ್ಯ, ಶ್ರಮ ಮತ್ತು ಆಟದ ವಿರಾಟ್ ಲೀಲೆಯನ್ನು ಅರ್ಥಮಾಡಿಕೊಂಡು ಗ್ರಹಿಸ ಬಲ್ಲ ಉತ್ಸಾಹಿ ಹೃದಯ, ಇದೇ ಅಂತಃಕರಣನ ಬರಹದ ಹೆಚ್ಚುಗಾರಿಕೆ.
©2025 Book Brahma Private Limited.