
“ಪ್ರೇಮಿಸಲು ಮುಖ್ಯವಾದ ಅರ್ಹತೆ - 'ವ್ಯಕ್ತಿತ್ವ'. ಪ್ರೇಮಿಸಲು ಮುಖ್ಯವಾದ ಅನರ್ಹತೆ - 'ಆಧಾರಗೊಳ್ಳುವುದು'.” “ಯಾವ ಸಮಸ್ಯೆಗಾದರೂ ಮೂಲಕಾರಣ ವ್ಯಕ್ತಿತ್ವ ಇಲ್ಲದಿರುವುದೇ. ಯಾವ ಲೇಖಕನೂ ಸಮಸ್ಯೆಗೆ ಪರಿಹಾರ ಹೇಳುವುದಿಲ್ಲ. ಮನುಷ್ಯರು ಹೇಗೆ ಬದುಕಬಹುದೆಂದು ಮಾತ್ರವೇ ಹೇಳುತ್ತಾನೆ.” “ಈ ಪ್ರಪಂಚದಲ್ಲಿ ಪ್ರತಿ ಓದುಗ ಇಲ್ಲವೇ ಓದುಗಳು, ಲೇಖಕ ಬರೆದ ಪ್ರತಿ ಅಂಶವೂ ಸಮಾಜಕ್ಕಾಗಿ ಎಂದುಕೊಳ್ಳುವರೇ ಹೊರತು, ತನಗಾಗಿ ಅಂದುಕೊಳ್ಳುವುದಿಲ್ಲ. ಬಹಳ ನಗು ಬರುವ ದುಃಖಕರ ವಿಷಯ ಇದು.” - ಅಗ್ನಿಪ್ರವೇಶ ಕಾದಂಬರಿಯಲ್ಲಿ ಬರುವ ಇಂತಹ ಅದ್ಭುತ ಸಾಲುಗಳಿಂದಲೇ ಓದುಗರನ್ನು ನಿಬ್ಬೆರಗಾಗಿಸುತ್ತಾರೆ ಜನಪ್ರಿಯ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್. ಗಂಡು-ಹೆಣ್ಣಿನ ಸಂಬಂಧಕ್ಕೆ ಮೂಲವಾಗಿ ಬೇಕಿರುವ ಪ್ರೀತಿ - ನಂಬಿಕೆಯ ಬಗ್ಗೆ ವಿಭಿನ್ನ ವಿಶ್ಲೇಷಣೆ ನೀಡುತ್ತಾ ರೋಚಕವಾಗಿ ಓದಿಸಿಕೊಂಡು ಕಾದಂಬರಿ- ‘ಅಗ್ನಿ ಪ್ರವೇಶ’.
©2025 Book Brahma Private Limited.