
ಮಾರ್ಕ್ ಟ್ವೈನ್ ಅವರ ಕಾದಂಬರಿ-‘ಹಲಕ್ ಬೆರ್‍ರಿ ಫಿನ್ ನ ಸಾಹಸಗಳು’ . ಇದನ್ನು ಕನ್ನಡಕ್ಕೆ ಅನುವಾದಿಸಿದವರು-ಕವಿ ಕೆ.ಎಸ್. ನರಸಿಂಹಸ್ವಾಮಿ. ಮಾರ್ಕಟ್ವೈನ್ ಎಂದರೆ ಅಮೆರಿಕದ ಉನ್ನತ ಹಾಗೂ ಪ್ರಾಧಿನಿಧಿಕ ಸಾಹಿತಿ. ಸಣ್ಣ ಕತೆಗಾರನೂ ಆಗಿದ್ದ. ಬೃಹತ್ ಕಾದಂಬರಿಗಳ ಮೂಲಕ ಸಾಹಿತ್ಯಾಸಕ್ತರ ಮನವನ್ನು ಗೆದ್ದಿದ್ದ. ಯಾವುದೇ ಸಾಹಿತ್ಯ ಸಂಪ್ರದಾಯಕ್ಕೂ ಮಣಿಯಲಿಲ್ಲ. ಯಾವುದೇ ಪ್ರಕಾರದ ಬಾಲಕ್ಕೂ ಜೋತು ಬೀಳಲಿಲ್ಲ. ಕಥೆ ಎಂದರೆ ಗೊತ್ತಿತ್ತು. ಅದು ಏಕೆ ಎಂದೂ ತಿಳಿದಿತ್ತು. ಓದುಗರಿಗೆ ಅರ್ಥವಾಗುವಂತೆ ಬರೆದಿದ್ದಷ್ಟೇ ಅವನಿಗೆ ಗೊತ್ತು. ಅದಕ್ಕೆ ಬಣ್ಣ ಬಳಿಯಲಿಲ್ಲ. ಆಕಾರ ಕತ್ತರಿಸಲಿಲ್ಲ. ಓದುಗರ ಪ್ರಕೃತಿಗೆ ತಕ್ಕಂತೆ ಬರೆಯುವುದು ಆತನಿಗೆ ಗೊತ್ತಿತ್ತು. ಬಹುಶಃ ಇದೇ ಆತನಿಗೆ ಖ್ಯಾತಿ ತಂದುಕೊಟ್ಟಿತು. ಬುದ್ದಿವಂತನಾದ ಆದರೆಭಾವ- ಗೊಂದಲಗಳಿಗೆ ಸಿಕ್ಕಿದ ಬಾಲಕನೊಬ್ಬನಿಗೆ ಆದ ಜಗತ್ ದರ್ಶನದ ಕಥೆ-ಹಕಲ್ ಬೆರ್‍ರಿಫಿನ್. ಹಾಸ್ಯ ಮತ್ತು ವ್ಯಂಗ್ಯವನ್ನೇ ಪ್ರಧಾನವಾಗಿಟ್ಟು ಕೊಂಡು ಮಾನವ ಜೀವನದ ಕಥೆಯನ್ನು ಹೇಳುವ ಕಾದಂಬರಿ ಇದು.

©2025 Book Brahma Private Limited.