ನನ್ನ ದೇವರು ಹೆಣ್ಣು

Author : ಎಂ. ಅಬ್ದುಲ್ ರೆಹಮಾನ್ ಪಾಷಾ

Pages 220

₹ 203.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 00
Phone: 9900998686

Synopsys

ನನ್ನ ದೇವರು ಹೆಣ್ಣು ಕೃತಿಯ ಮೂಲ ಲೇಖಕರು ನೂರ್ ಜಹೀರ್. ಇದರ ಕನ್ನಡ ಅನುವಾದವನ್ನು ಅಬ್ದುಲ್ ರೆಹಮಾನ್ ಪಾಷ ಎಂ ಮಾಡಿದ್ದಾರೆ. 
ಸಂಪ್ರದಾಯಸ್ಥ ಮುಸ್ಲಿಮ್ ಕುಟುಂಬದಿಂದ ಬಂದ ಸಫಿಯಾ ತನ್ನ ಉದಾರವಾದಿ ಪತಿ ಅಬ್ಬಾಸ್ ನ ಉತ್ತೇಜನದಿಂದ ನಿರ್ದಿಷ್ಟ ನಿಲುವು ಮತ್ತು ಆತ್ಮಸ್ಥೈರ್ಯವನ್ನು ತಾಳಿ, ಎಲ್ಲ ಬಗೆಯಲ್ಲಿ ವಿಮೋಚಿತರಾದ ಮಹಿಳೆಯರ ಸಬಲತೆಯಿಂದಲೇ ಶಕ್ತಿ ಪಡೆಯುವ ಮುಕ್ತ ಭಾರತದ ಕನಸನ್ನು ಕಾಣುತ್ತಾಳೆ. ಸ್ವಾತಂತ್ರ್ಯ ಪೂರ್ವದ ಒಂದೆರಡು ವರ್ಷಗಳಿಂದ ಹಿಡಿದು ಪ್ರಸಿದ್ಧ ಶಾಹ್‍ಬಾನೂ ಪ್ರಕರಣದವರೆಗಿನ ಪ್ರಕ್ಷುಬ್ಧ ಭಾರತದ ಪರಿಸರದಲ್ಲಿ ಕಥೆಯು ನೆಲೆಗೊಳ್ಳುತ್ತದೆ. ಹೋರಾಟದ ಹಾದಿಯಲ್ಲಿ ಪತಿ-ಪತ್ನಿ ಇಬ್ಬರೂ ಸಾಯುತ್ತಾರೆ.
 

About the Author

ಎಂ. ಅಬ್ದುಲ್ ರೆಹಮಾನ್ ಪಾಷಾ

ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ  ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...

READ MORE

Reviews

ಬೆಳಕಿಂಡಿಯಾಗದ ವ್ಯವಸ್ಥೆ ; ವ್ಯಾಖ್ಯೆ ಮೀರಿದ ಪ್ರೀತಿ

ತಾಂತ್ರಿಕವಾಗಿ ಹೇಳುವುದಾದರೆ, ಇಲ್ಲಿ ಹೇಳಲು ಹೊರಟಿರುವ ಎರಡು ಪುಸ್ತಕಗಳ ವಸ್ತುವಿಷಯಗಳು ಈಗಿನ ದಿನಮಾನಕ್ಕೆ ಅಪ್ರಸ್ತುತ ಎನಿಸುತ್ತವೆ. ತ್ರಿವಳಿ ತಲಾಖ್ ಮತ್ತು ಗಂಡು- ಹೆಣ್ಣಿನ ನಡುವಿನ ಸಂಬಂಧದ ಹೂರಣ ಕ್ರಮವಾಗಿ ಈ ಪುಸ್ತಕಗಳ ಕಥಾವಸ್ತು. ಆದರೆ, ತ್ರಿವಳಿ ತಲಾಖ್ ದೇಶದಲ್ಲಿ ನಿಷೇಧವಾಗಿದೆ; ವ್ಯಭಿಚಾರ ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೇ ಷರಾ ಬರೆದಿದೆ- ಹೀಗೆಂದು ಹೇಳಿ ಒಂದೇ ವಾಕ್ಯದಲ್ಲಿ ತಳ್ಳಿಹಾಕಿಬಿಡಬಹುದಾದ ಸಂಗತಿಗಳಂತೂ ಇವಲ್ಲ. ಸಾಮಾಜಿಕವಾಗಿ, ನೈತಿಕವಾಗಿ ಈ ಸಂಗತಿಗಳಿಗೆ ಸಾವಿಲ್ಲ ಎಂಬುದು ಸೂರ್ಯಸ್ಪಷ್ಟ. ಸಂಪ್ರದಾಯವಾದಿ ಮತ್ತು ಉದಾರವಾದಿ ನಿಲುವುಗಳ ನಡುವಿನ ತಾಕಲಾಟ ಲಾಗಾಯ್ತಿನಿಂದಲೂ ಇದ್ದದ್ದೇ. ಅದರಲ್ಲೂ ಮೂಲಭೂತವಾದ ಕೊಂಚ ಹೆಚ್ಚೇ ವಿಜೃಂಭಿಸುವ ಮುಸ್ಲಿಂ ಸಮುದಾಯದಲ್ಲಿ ಕಾಲನ ಮುಳ್ಳು ಆಧುನಿಕ ಗಡಿಯಾರದಲ್ಲೂ ಸ್ತಬ್ದವಾಗಿಬಿಟ್ಟಿದೆಯೇನೋ ಎಂಬಂತೆ ಭಾಸವಾಗುತ್ತದೆ. ಅಷ್ಟಾದರೂ, ಆ ಮುಳ್ಳಿಗೆ ಚಲನಶೀಲತೆ ತಂದುಕೊಡುವ ಪ್ರಯತ್ನ ತನ್ನೆಲ್ಲ ಇತಿಮಿತಿಗಳ ನಡುವೆಯೂ ಅವಿರತವಾಗಿ ನಡೆಯುತ್ತಲೇ ಬಂದಿರುವುದನ್ನು ನೂರ್ ಜಹೀರ್ ಅವರ 'ನನ್ನ ದೇವರು ಹೆಣ್ಣು' ಪುಸ್ತಕ ಮತ್ತೊಮ್ಮೆ ಸಾಬೀತುಪಡಿಸಿದೆ. ಅವಿಭಜಿತ ಭಾರತದಲ್ಲಿ ಪ್ರತಿಷ್ಠಿತ ಮುಸ್ಲಿಂ ಕುಟುಂಬವೊಂದರಲ್ಲಿನ ಸಂಪತ್ತಿನ ಮೇಲಾಟದೊಂದಿಗೆ ಆರಂಭವಾಗುವ ಈ ಕಥನ, ದೇಶದೊಟ್ಟಿಗೇ ಇಬ್ಬಾಗವಾಗುವ ಮನಸ್ಸುಗಳ ತಾಕಲಾಟ, ಉದಾರವಾದಿ ಚಿಂತಕರನ್ನು ಹೊಸಕಿಹಾಕುವ ರಾಜಕೀಯ ವ್ಯವಸ್ಥೆಯನ್ನು ಸಮರ್ಥವಾಗಿ ಚಿತ್ರಿಸುತ್ತದೆ. ತಾವು ಈ ಪುಸ್ತಕ ಬರೆಯುವಾಗ ಭೀತಿಗೆ ಒಳಗಾಗಿದ್ದುದಾಗಿ ಮುನ್ನುಡಿಯಲ್ಲಿ ನೂರ್ ಬರೆದುಕೊಂಡಿದ್ದಾರೆ. ಆದರೆ ಆ ಭೀತಿಯನ್ನು ಮೆಟ್ಟಿ, ತಮ್ಮ ಸಮುದಾಯದ ಹೆಣ್ಣುಮಕ್ಕಳ 'ಧರ್ಮಸಂಕಟಗಳಿಗೆ ಅವರು ಧ್ವನಿಯಾಗಿರುವುದು, ವೈರುಧ್ಯಗಳಿಂದ ಕೂಡಿರುವ ಶರಿಯತ್ ಕಾನೂನಿಗೆ. ಅವಶ್ಯವಾಗಿ ಆಗಬೇಕಾಗಿರುವ ಪರಿಷ್ಕರಣೆಯನ್ನು ಬಲವಾಗಿ ಪ್ರತಿಪಾದಿಸಿರುವುದು ಈ ಪುಸ್ತಕದ ವೈಶಿಷ್ಟ್ಯ.

ನೀಳಾ ಎಂ. ಎಚ್‌

8 ಡಿಸೆಂಬರ್‌ 2019,  ಕೃಪೆ : ಪ್ರಜಾವಾಣಿ

Related Books