ಅಮಾನುಷ

Author : ವಿವೇಕಾನಂದ ಕಾಮತ್

Pages 180

₹ 85.00




Year of Publication: 2006
Published by: ಚಾರುಮತಿ ಪ್ರಕಾಶನ
Address: 1161, 9ನೇ ಅಡ್ಡರಸ್ತೆ, ಕತ್ರಿಗುಪ್ಪೆ ಮುಖ್ಯರಸ್ತೆ ಅಶೋಕನಗರ, ಬೆಂಗಳೂರು - 560050
Phone: 9448235553

Synopsys

ಕುಡುಕ ಗಂಡನನ್ನು ತೊರೆದು ಹೆಣ್ಣುಮಕ್ಕಳೊಡನೆ ಯಾರೋ ಮೂರನೆಯವರನ್ನು ನಂಬಿ ಪೇಟೆಗೆ ಬರುತ್ತಾಳೆ ನಿಂಗವ್ವ. ಆ ದುರುಳ ಮಧ್ಯವರ್ತಿ ಮೂವರನ್ನು ಮೂರು ದಿಕ್ಕು ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಾನೆ. ಒಬ್ಬರಿಗೊಬ್ಬರ ಸಂಪರ್ಕವೂ ಇಲ್ಲ. ಜೊತೆಗೆ ಅವರೊಡನೆ ವಿಧಿ ಆಡುವ ಅಮಾನುಷ ಆಟಗಳು ಅವರ ಅಮಾಯಕ ಬದುಕನ್ನು ಆಪೋಷನ ತೆಗೆದುಕೊಳ್ಳುತ್ತದೆ. ರಾಗಸಂಗಮ ಪತ್ರಿಕೆಯಲ್ಲಿ ಪ್ರಕಟಗೊಂಡ ಕಾದಂಬರಿ ಇದು.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books