ಮರಳ ದಿಬ್ಬಗಳಲ್ಲಿ ಮಹಿಳೆ

Author : ವಿಜಯಾ ಸುಬ್ಬರಾಜ್

Pages 168

₹ 160.00




Year of Publication: 2018
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

’ದಿ ವುಮನ್ ಇನ್ ದಿ ಡ್ಯೂನ್ಸ್ ’ಕಾದಂಬರಿಯ ಮೂಲ ಲೇಖಕ ಕೋಬೊ ಆಬೆ. ಇದನ್ನು ಕನ್ನಡಕ್ಕೆ ಡಾ. ವಿಜಯಾ ಸುಬ್ಬರಾಜ್ ತಂದಿದ್ದಾರೆ.

ಈ ಕಾದಂಬರಿಯ ನಾಯಕ ಜುಂಪಿನಿಕಿ ಟೋಕಿಯೋ ನಿವಾಸಿ. ವೃತ್ತಿಯಿಂದ ಅಧ್ಯಾಪಕನಾದರೂ, ಪ್ರವೃತ್ತಿಯಿಂದ ಕೀಟ ವಿಜ್ಞಾನಿ ಅಥವಾ ಕೀಟ ಶಾಸ್ತ್ರಜ್ಞ. ಇಂತಹ ಪರಿಚಯದಿಂದ ಮುಂದುವರೆಯುವ ಕಾದಂಬರಿಯ ಕತೆ ಬೇರೆಯೇ ಆಯಾಮ ಪಡೆಯುತ್ತದೆ.

ಅಪರಿಚಿತ ಹೆಣ್ಣು- ಗಂಡು , ಆಕಸ್ಮಿಕವಾಗಿ, ಪರಿಸ್ಥಿತಿಗಳ ಒತ್ತಡದಿಂದಾಗಿ, ಮರಳ ದಿಬ್ಬಗಳ ಪರಿಸರದಲ್ಲಿ ಪಾತಾಳದಾಳದ  ಮರಳಿನ ಗುಂಡಿಯ ಮನೆಯಲ್ಲಿ ಒಟ್ಟಿಗೆ ಇರಬೇಕಾಗುತ್ತದೆ. ಮರಳಿನ ವೈವಿಧ್ಯಮಯ ಚಲನಶೀಲತೆಗೆ ತಮ್ಮನ್ನು ಹೊಂದಿಸಿಕೊಂಡು, ಅದರ ಸ್ವಭಾವಕ್ಕೆ ಹೊಂದಿಕೊಂಡು , ತಮ್ಮನ್ನು ಕಾಯ್ದುಕೊಂಡು ಬದುಕುವ ಕಥೆಯ ಚಿತ್ರಣ ಕುತೂಹಲ ಹುಟ್ಟಿಸುತ್ತದೆ.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books