
ಪ್ರೀತಿ-ಪ್ರೇಮ ಈ ಜಗತ್ತಿನ ಬೆಚ್ಚಗಿನ ಭಾವ ಎನ್ನುವುದರಲ್ಲಿ ಯಾರ ಭಿನ್ನಾಭಿಪ್ರಾಯವೂ ಇರದು! ಅದೊಂದು ಅನುಭೂತಿ. ಅದನ್ನೇ ಕವಿಗಳು, ಸಾಹಿತಿಗಳು ತೀರಾ ವೈಭವೀಕರಿಸಿದರೂ ಅದು ಪೂರಾ ಸುಳ್ಳೇನು ಅಲ್ಲ. ‘ಬಾಡದ ಹೂ’ ಆಗಿನ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದಾಗ ಓದುಗರಲ್ಲಿ ಒಂದು ರೀತಿಯ ಸಂಚಲನ. ಲೇಖಕಿಯ ಮೊದಲ ಕಾದಂಬರಿಗೆ ಅದ್ಭುತ ಸಾಗತ. ವ್ಯವಸ್ಥಾಪಕ ಸಂಪಾದಕರಾದ ಮ.ನ.ಮೂರ್ತಿಗಳು ಓದುಗರ ಮೆಚ್ಚುಗೆ ಪೂರದ ಪತ್ರಗಳ ರಾಶಿಯನ್ನು ಮುಂದೆ ಹಾಕಿದ್ದರು. ಅಂದಿನ ಓದುಗರ ಮೆಚ್ಚುಗೆಯೇ ಇಂದೂ ಉಳಿದುಕೊಂಡಿದೆ; ಹನ್ನೆರಡು ಬಾರಿ ಅಚ್ಚಾಗಿದೆ. ಬೆಳ್ಳಿ ತೆರೆಯಲ್ಲೂ ಮಿನುಗಿದ ‘ಬಾಡದ ಹೂ’ ಚಲನಚಿತ್ರ ರಸಿಕರ ಪ್ರಶಸ್ತಿಯನ್ನು ಪಡೆದಿತ್ತು.
©2025 Book Brahma Private Limited.