ಕಳ್ಳಿಗಾಡಿನ ಇತಿಹಾಸ

Author : ಮಲರ್ ವಿಳಿ. ಕೆ

Pages 267

₹ 275.00




Year of Publication: 2021
Published by: ಸಾಹಿತ್ಯ ಅಕಾಡೆಮಿ
Address: ರವೀಂದ್ರ ಭವನ, 35, ಫಿರೋಜಶಾಹ ರಸ್ತೆ, ನವದೆಹಲಿ- 110001

Synopsys

‘ಕಳ್ಳಿಗಾಡಿನ ಇತಿಹಾಸ’ ತಮಿಳು ಲೇಖಕ ವೈರಮುತ್ತು ಅವರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ತಮಿಳು ಕಾದಂಬರಿಯ ಕನ್ನಡಾನುವಾದ. ಈ ಕೃತಿಯನ್ನು ಮಲರ್ ವಿಳಿ. ಕೆ ಅವರು ಕನ್ನಡೀಕರಿಸಿದ್ದಾರೆ. ಪ್ರಸ್ತುತ ಕಾದಂಬರಿ ಕಳ್ಳಿಪ್ಪಟ್ಟ ಎಂಬ ಹಳ್ಳಿಯಲ್ಲಿನ ಬಡ ಹಾಗೂ ಶೋಷಿತ ಜನರ ಬದುಕಿನ ಬವಣೆಯನ್ನು ಯಥಾವತ್ತಾಗಿ ಚಿತ್ರಿಸುವ ಪಾಮರರ ಕಥಾನಕ. ಇಲ್ಲಿಯ ನಾಯಕ ಪೇಯತ್ತೇವರ್ ಬರಡು ನೆಲದಲ್ಲಿ, ಬವಣೆಯ ಬದುಕಿನಲ್ಲಿ ನಿರಂತರ ಛಲದಿಂದ ಹೋರಾಡುತ್ತಾ ಪ್ರಾಮಾಣಿಕತೆ, ಆತ್ಮಸ್ಥೆರ್ಯ, ಭರವಸೆ, ನಂಬಿಕೆಯ ತಳಹದಿಯ ಮೇಲೆ ಗಟ್ಟಿಯಾಗಿ ನಿಂತ ಹಿರಿಯ ಜೀವ. 1958ರಲ್ಲಿ ವೈಗೈ ನದಿಗೆ ಅಣೆಕಟ್ಟು ಕಟ್ಟಿ ಸುಮಾರು 12ರಿಂದ 14 ಗ್ರಾಮಗಳು ಮುಳುಗಡೆಯಾಗುವ ಸಂದರ್ಭವೇ ಇಲ್ಲಿನ ವಸ್ತು. ತಾವು ಹುಟ್ಟಿ ಬೆಳೆದ ಮಣ್ಣಿನ ಬಗ್ಗೆ ಅವಿನಾಭಾವ ಸಂಬಂಧವನ್ನು ಅನಿವಾರ್ಯವಾಗಿ ಕಳಚಿಕೊಂಡು ಗೊತ್ತುಗುರಿಯಿಲ್ಲದೆ ಹೊರಟ ಜನರ ದಾರುಣ ಪರಿಸ್ಥಿತಿ ಮನಕಲಕುತ್ತದೆ. ಕಳಪಟ್ಟ ಮುಳುಗಡೆಯಾಗುತ್ತಿದ್ದಾಗ ತನ್ನ ಮನೆಯ ಗೋಡೆಯ ಮಣ್ಣನ್ನು ಒಂದು ಹಿಡಿ ಬಾಗಿ ತೆಗೆದುಕೊಳ್ಳುತ್ತಿದ್ದಂತೆಯೇ ಗೋಡೆ ಕುಸಿದು ಮರಣವನ್ನಪ್ಪುವ ದೃಶ್ಯ ಹೃದಯ ವಿದ್ರಾವಕವಾದುದು.

About the Author

ಮಲರ್ ವಿಳಿ. ಕೆ

ಪ್ರಸಿದ್ಧ ಅನುವಾದಕರಾಗಿರುವ ಡಾ.ಮಲರ್ ವಿಳಿ ಕೆ ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಸ್ತುತ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಮಾಸ್ತಿ ಮತ್ತು ಪುದುಮೈಪಿತ್ತನ್ ಸಣ್ಣ ಕಥೆಗಳ ಒಂದು ಅಧ್ಯಯನ” ಎಂಬ ಇವರ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಕಳೆದ ಎರಡು ದಶಕಗಳಿಂದ ಅನುವಾದ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ-ತಮಿಳು ಭಾಷೆಯ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ತಮಿಳು ಸಾಹಿತ್ಯಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿರುವ ಸಂಗಂ ಸಾಹಿತ್ಯವನ್ನು ಕನ್ನಡಕ್ಕೆ ತರುವಲ್ಲಿ ...

READ MORE

Reviews

‘ಕಳ್ಳಿಗಾಡಿನ ಇತಿಹಾಸ’ ಕೃತಿಯ ವಿಮರ್ಶೆ

ಕಾದಂಬರಿ ಕಳ್ಳಿಪಟ್ಟಿ ಎಂಬ ಹಳ್ಳಿಯಲ್ಲಿನ ಬಡ ಹಾಗೂ ಶೋಷಿತ ಜನರ ಬದುಕಿನ ಬವಣೆಯನ್ನು ಯಥಾವತ್ತಾಗಿ ಚಿತ್ರಿಸುವ ಪಾಮರರ ಕಥಾನಕ, 1958ರಲ್ಲಿ ವೈಗೈ ನದಿಗೆ ಅಣೆಕಟ್ಟು ಕಟ್ಟಿ ಸುಮಾರು 12 ರಿಂದ 14 ಗ್ರಾಮಗಳು ಮುಳುಗಡೆಯಾಗುವ ಸಂದರ್ಭವೇ ಈ ಇಲ್ಲಿನ ಕಥಾವಸ್ತು. ತಾವು ಹುಟ್ಟಿ ಬೆಳೆದ ಊರನ್ನು ತೊರೆದು, ಗೊತ್ತು ಗುರಿ ಇಲ್ಲದೆ ಹೊರಡುವ ಜನರ ದಾರುಣ ಸ್ಥಿತಿಯನ್ನು ಈ ಕಾದಂಬರಿ ಚಿತ್ರಿಸುತ್ತದೆ. ಕಳ್ಳಿಪಟ್ಟಿ ಮುಳುಗಡೆಯಾಗುವ ಹೊತ್ತಿನಲ್ಲಿ ತನ್ನ ಮನೆಯ ಗೋಡೆಯ ಮಣ್ಣನ್ನು ಒಂದು ಹಿಡಿ ಬಾಗಿ ತೆಗೆದುಕೊಳ್ಳುತ್ತಿದ್ದಂತೆಯೇ ಗೋಡೆ ಕುಸಿದು ಮರಣವನ್ನಪ್ಪುವ ದೃಶ್ಯ ಓದುಗರ ಹೃದಯವನ್ನು ಹಿಂಡುತ್ತದೆ. ಈ ಕಾದಂಬರಿ ವ್ಯವಸ್ಥೆಯ ಅಮಾನುಷ ಕೌರ್ಯವನ್ನು ತಣ್ಣಗೆ ದಾಟಿಸುತ್ತದೆ.

(ಕೃಪೆ ; ಹೊಸಪುಸ್ತಕ, ಸಮಾಜಮುಖಿ)

Related Books