ಶೃಂಗಾರಪುರ ಒಂದು ಕಿಲೋಮೀಟರ್‌

Author : ಆರ್.ವಿ. ಕಟ್ಟೀಮನಿ, ತಡಕಲ್

Pages 224

₹ 40.00




Year of Publication: 1994
Address: ಕವಿತಾಳ  ರಾಯಚೂರು-584120

Synopsys

ʼಶೃಂಗಾರಪುರ, ಒಂದು ಕಿಲೋಮೀಟರ್‌ ʼ ತೆಲುಗು ಕಾದಂಬರಿಯನ್ನು ಲೇಖಕ ಆರ್.‌ ವಿ ಕಟ್ಟೀಮನಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳ್ಳಿಯೊಂದರ ವಿಚಿತ್ರ ಆವರಣದ ಸುತ್ತ ಕಾದಂಬರಿಯು ಸುತ್ತುತ್ತದೆ. ಪ್ರತಿ ವರ್ಷವೂ ಒಂದು ಗ್ರಾಮದಲ್ಲಿ ಸದೃಡ ಹಾಗೂ ಸುರದ್ರೂಪಿ ಐದು ಯುವಕರನ್ನು ಕೆಲವೊಂದು ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿ, ಅವರಿಗೆ ತಾವು ಬಯಸಿದ ಹೆಣ್ಣುಮಕ್ಕಳ ಜೊತೆಗೆ ಒಂದು ವರುಷ ಕಳೆಯುವ ಅವಕಾಶವನ್ನು ನೀಡಲಾಗುತ್ತದೆ. ಇದರ ಜೊತೆಗೆ, ವಿಶೇಷ ಮರ್ಯಾದೆಯೂ ಅವರಿಗೆ ಆ ಊರಿನಲ್ಲಿ ದೊರಕುತ್ತದೆ. ಇದು ಕತೆಯಲ್ಲಿ ಬರುವ ಮುಖ್ಯ ಅಧ್ಯಾಯ. ಈ ಸಂಪ್ರದಾಯದಿಂದ ಅಲ್ಲಿನ ಹೆಣ್ಣು ಮಕ್ಕಳು ಪಡುವ ಪಾಡು ಮತ್ತು ಇದರಿಂದ ಹೊರಬರಲು ಅಥವಾ ಈ ಸಂಪ್ರದಾಯವನ್ನು ತೊಡೆದು ಹಾಕಲು ಅವರು ನಡೆಸುವ ಕಸರತ್ತೇ ಈ ಕಾದಂಬರಿಯ ಒಟ್ಟು ಸಾರಾಂಶ.

 

About the Author

ಆರ್.ವಿ. ಕಟ್ಟೀಮನಿ, ತಡಕಲ್

ಲೇಖಕ ಆರ್.ವಿ. ಕಟ್ಟೀಮನಿ ಅವರು ತೆಲುಗು ಲೇಖಕ ಯಂಡಮೂರಿ ವೀರೇಂದ್ರನಾಥ ಅವರ ಕೆಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಕೃತಿಗಳು: ಇತಿಹಾಸ ಕಲಿಸುವ ಪಾಠ, ದುಡ್ಡು ಮೈನಸ್ ದುಡ್ಡು, ಮಳೆಗಾಲದ ಒಂದು ಸಂಜೆ, ಪರಿಮಳ (ಅನುವಾದಿತ ಕೃತಿಗಳು),  ...

READ MORE

Related Books