ಅಣ್ಣ ತಮ್ಮಂದಿರಿಬ್ಬರ ಕುಟುಂಬದಲ್ಲಿ ಹಿರಿಯವನ ಮಗಳಾದ ಅನುಪಮಾ ಪ್ರೇಮದಲ್ಲಿ ಅನುಭವಿಸುವ ಗೊಂದಲ, ವಾಸ್ತವಕ್ಕೆ ಅನುಗುಣವಾಗಿ ಪರಿಹಾರ ಹುಡುಕಿಕೊಳ್ಳುವ ಪ್ರಬುದ್ಧತೆ, ತನಗೆ ದಕ್ಕದ್ದು ತನ್ನ ರಕ್ತ ಸಂಬಂಧಿಗೆ ಸಿಗಲಿ ಎಂದು ಹಾರೈಸಿ ಅದಕ್ಕಾಗಿ ಹೂಡುವ ರಹಸ್ಯ ಏರ್ಪಾಡು ಮತ್ತು ಅದಕ್ಕೆ ಸಹಕರಿಸುವ ವೇಣು ಸುತ್ತಿಬಳಸಿ ಕೊನೆಗೂ ಒಂದಾಗುವ ಪ್ರಾಮಾಣಿಕ ದುಡಿಮೆಗಾರ ಹೇಮಂತ ಮತ್ತು ಮಾಲಿಕನ ಮೇಲೆ ಗೌರವಪೂರ್ವಕ ಅನುರಾಗ ಮೂಡಿಸಿಕೊಳ್ಳುವ ಬಡಕುಟುಂಬದ ಜಾನಕಿ, ನಾನು ಬಡವಿ ಆತ ಬಡವ ಒಲವೇ ನಮ್ಮಯ ಬದುಕು ಎನ್ನುವ ಆದರ್ಶ ಜೋಡಿ ವೇದಾ ಮತ್ತು ಗಿರೀಶ್ ಹೀಗೆ ಅಪರಿಚಿತ ಹಲವು ಜೋಡಿಗಳ ಕಥೆಗಳು ಈ ಪುಸ್ತಕದಲ್ಲಿದೆ. ಪ್ರೇಮ, ಅನುರಾಗಗಳ ಜೊತೆಗೆ ಸಾಮಾಜಿಕ ಮೌಲ್ಯಗಳ ಚಿತ್ರಣವೂ ಈ ಕಾದಂಬರಿಯಲ್ಲಿ ಕಾಣಸಿಗುತ್ತದೆ.
ಬೆಳಗಾವಿ ತಾಲ್ಲೂಕು ಸುಳೇಭಾವಿಯಯವರಾದ ಪಾರ್ವತಿ ಅವರು ಗ್ರಾಮ ಪಂಚಾಯಿತಿ ಆಡಳಿತ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರಿನ ಶಾಂಗ್ರೀ- ಲಾ ಅಕಾಡೆಮಿ ನಿರ್ದೇಶಕಿಯಾಗಿ ಸಾಮಾಜಿಕ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನೇಕಾರರ ಬದುಕು ಬವಣೆಯನ್ನು 'ಮಿಲನ' ಕಾದಂಬರಿಯಲ್ಲಿ ನೈಜವಾಗಿ, ಕಲಾತ್ಮಕವಾಗಿ ಕಟ್ಟಿಕೊಟ್ಟ ಪಾರ್ವತಿ ಪಿಟಗಿ ಐದು ಕಾದಂಬರಿ, ಒಂದು ಕಥಾ ಸಂಕಲನ, ಲೇಖನ ಸಂಕಲನ ಪ್ರಕಟಿಸಿದ್ದಾರೆ. ಅವರ ಹಲವು ಕಥೆ, ಕಾದಂಬರಿ, ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಮಿಲನ' ಕಾದಂಬರಿಗೆ ದೇವರ ದಾಸಿಮಯ್ಯ ಸಾಹಿತ್ಯ ಶ್ರೀ ಪ್ರಶಸ್ತಿ ಸಂದಿದೆ. ಅವರ ಬಹುತೇಕ ಕಥೆ, ಕಾದಂಬರಿಗೆ ಪ್ರಶಸ್ತಿಗಳು ಸಂದಿವೆ. ಬೆಳಗಾವಿ ಜಿಲ್ಲೆಯ ಆಡುಭಾಷೆಯಲ್ಲಿ ...
READ MORE