ಮಹಾತ್ಮನಿಗಾಗಿ ಕಾಯುತ್ತಾ

Author : ಪೆರ್ಲ ಗೋಪಾಲಕೃಷ್ಣ ಪೈ

Pages 244

₹ 195.00




Year of Publication: 2013
Published by: ಪ್ರಿಸಮ್ ಬುಕ್ಸ್ ಪ್ರೈ. ಲಿ.
Address: # 1865, 32ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560070

Synopsys

ಭಾರತದ ಖ್ಯಾತ ಕಥೆಗಾರ ಆರ್.ಕೆ. ನಾರಾಯಣ ಅವರ ಇಂಗ್ಲಿಷ್ ಕಾದಂಬರಿಯನ್ನು ಲೇಖಕ ಪೆರ್ಲ ಗೋಪಾಲಕೃಷ್ಣ ಪೈ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಮಹಾತ್ಮನಿಗಾಗಿ ಕಾಯುತ್ತಾ. ಮಹಾತ್ಮ ಗಾಂಧೀಜಿಯನ್ನು ಅವರ ತತ್ವ-ಸಿದ್ಧಾಂತ ಹಾಗೂ ಹೋರಾಟಗಳ ಕುರಿತು ಮಾಹಿತಿ ತಿಳಿಯದೇ ಸ್ವಾತಂತ್ಯ್ರ ಹೋರಾಟದಲ್ಲಿ ಧುಮುಕುವ ಬಹುತೇಕರಂತೆ ಕಥಾ ನಾಯಕನಾದ ಶ್ರೀರಾಮ ಹಾಗೂ ನಾಯಕಿ ಭಾರತಿ ಸಹ ಇದ್ದು, ಜೊತೆಗೆ ತಮ್ಮ ಪ್ರೇಮ ವ್ಯವಹಾರದಲ್ಲಿ ಆಸಕ್ತರಾಗಿರುತ್ತಾರೆ. ತಮ್ಮ ಪ್ರೇಮ ಹಾಗೂ ಸ್ವಾತಂತ್ಯ್ರ ಹೋರಾಟ ಈ ಎರಡನ್ನೂ ಹದವಾಗಿ ಬೆರೆಸಿ, ರಚಿಸಿದ ಕಾದಂಬರಿ ಇದು. ಅನುವಾದವೂ ಸಹ ತುಂಬಾ ಆತ್ಮೀಯವಾಗಿದೆ.

About the Author

ಪೆರ್ಲ ಗೋಪಾಲಕೃಷ್ಣ ಪೈ

ಮೂಲತಃ ಕೇರಳದ ಕಾಸರಗೋಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಮಧ್ಯೆ ಇರುವ ಪೆರ್ಲ ಮೂಲದ ಗೋಪಾಲಕೃಷ್ಣ ಪೈ ಅವರು ಕತೆ,ನಾಟಕ ,ಪ್ರಬಂದ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ಅವರ ಮತ್ತಿತರ ಕೃತಿಗಳು ಇಂತಿವೆ; ತಿರುವು, ಈ ಬೆರಳ ಗುರುತು, ಹಾರುವ ಹಕ್ಕಿಯ ಗೂಡಿನ ದಾರಿ ,ಮೊದಲಾದ ಚಿಕ್ಕ ಕಥೆಗಳು. ಆಧುನಿಕ ಚೀನೀ ಸಣ್ಣಕಥೆಗಳು, 'ಪೆರ್ಲ ಗೋಪಾಲಕೃಷ್ಣ ಪೈ'ರವರ ಸ್ವಪ್ನ ಸಾರಸ್ವತ ಕಾದಂಬರಿಗೆ 2010 ರ ಸಾಲಿನ 'ಪ್ರತಿಷ್ಠಿತ ಕೇಂದ್ರ ಸಾಹಿತ್ಯ ...

READ MORE

Related Books