ಸಾಮ್ರಾಟ್ ಅಶೋಕ

Author : ಸೊಂದಲಗೆರೆ ಲಕ್ಷ್ಮೀಪತಿ

Pages 1200

₹ 500.00




Year of Publication: 2019
Published by: ಕಾವ್ಯಕಲಾ ಪ್ರಕಾಶನ

Synopsys

`ಸಾಮ್ರಾಟ್ ಅಶೋಕ' ಕೃತಿಯ ಮೂಲ ಲೇಖಕ ವೈಸೆ ಕ್ಯೂನಿಂಗ್. ಕೃತಿಯನ್ನು ಸೊಂದಲಗೆರೆ ಲಕ್ಷ್ಮೀಪತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಶೋಕನ ಜೀವನ-ಸಾಧನೆಯನ್ನು ಈ ಕಾದಂಬರಿ ಸೊಗಸಾಗಿ ಕಟ್ಟಿಕೊಡುತ್ತದೆ. 

ಅಶೋಕನ ಜೀವನ ಮತ್ತು ರಾಜ್ಯಭಾರದ ಬಗ್ಯೆ ಕೆಲವು ಬೌದ್ಧ ಆಕರಗಳು ಬೆಳಕು ಚೆಲ್ಲುತ್ತವೆ. ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿಬರುತ್ತದೆ. ಕಳಿಂಗ ಯುದ್ಧದ ಬಳಿಕ ಬೌದ್ಧ ಮತವನ್ನು ಪ್ರಚಾರಗೊಳಿಸುವುದರಲ್ಲಿ ತೊಡಗಿಕೊಂಡ ಸಾಮ್ರಾಟ್ ಅಶೋಕ, ವಿಶ್ವದೆಲ್ಲೆಡೆ ಬೌದ್ಧ ಮತ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದವನು. 

About the Author

ಸೊಂದಲಗೆರೆ ಲಕ್ಷ್ಮೀಪತಿ

ಸೊಂದಲಗೆರೆ ಲಕ್ಷ್ಮಿಪತಿ ಅವರು ಉತ್ತಮ ಅನುವಾದಕರು. ಸ್ವತಃ ಲೇಖಕರು, ಕಥೆಗಾರರು ಆಗಿ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರಿಗಿದೆ. ಭಾರತೀಯ ಪ್ರಾತಿನಿಧಿಕ ಕತೆಗಳು, ಬೌದ್ಧ ಧರ್ಮದ ಅನನ್ಯತೆ, ಸಾಮ್ರಾಟ ಅಶೋಕ, ಜಗತ್ತಿನ ಉದಾತ್ತ ಚಿಂತಕರು, ಅನ್ಯ ಲೋಕದಲ್ಲಿ ಜೀವಿಗಳಿದ್ದಾರೆಯೇ? ಶ್ರೇಷ್ಠ ಅನುವಾದಿತ ಕಥೆಗಳು ಹೀಗೆ ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ...

READ MORE

Related Books