ಆರಾಧಿತೆ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)



Year of Publication: 1980
Published by: ಸುಧಾ ಎಂಟರ್‍ ಪ್ರೈಸಸ್
Address:  #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560109
Phone: 98454 49811

Synopsys

ಗಂಡಿನ ದೈಹಿಕ ಕಾಮನೆಗಳಿಗಷ್ಟೇ ಅಲ್ಲದೆ  ಅವನ ಮನಸ್ಸಿನ ಭಾವನೆಗಳಿಗೆ ಸ್ಪಂದಿಸಿ ಜೊತೆಗೂಡುವ ಹೆಣ್ಣು ಕೇವಲ ಪ್ರೀತಿಸಲ್ಪಡುವುದಷ್ಟೇ ಅಲ್ಲ, ಆರಾಧಿಸಲ್ಪಡುತ್ತಾಳೆ,ಯಾವ ಹೆಣ್ಣು ಆರಾಧಿಸಲ್ಪಡುತ್ತಾಳೋ ಅಂತಹ ಹೆಣ್ಣು ನಿಜಕ್ಕೂ ಮಾದರಿಯಾಗಬಲ್ಲಳು.ಪ್ರೀತಿ ಕೇವಲ ಗಂಡು ಹೆಣ್ಣಿನ ನಡುವಿನ ಸಂಬಂಧವಲ್ಲ.ಸಂಗಾತಿಯ ಸುತ್ತಲಿನ ಸಂಬಂಧಗಳನ್ನು ಬಸವಳಿಯದಂತೆ ಕಾಪಿಟ್ಟುಕೊಂಡು ಸಾಗುವುದು ಪ್ರೀತಿಸಲ್ಪಟ್ಟವರಿಗೆ ಕೊಡುವ ನಿಜವಾದ ಗೌರವ.ಆದರೆ ದಾಪುಗಾಲು ಹಾಕುತ್ತಾ ಸಾಗುತ್ತಿರುವ ಜಗದ ಬದಲಾವಣೆಯ ಎದುರು ಕ್ಷೀಣಿಸುತ್ತಿರುವ ಭಾವನಾತ್ಮಕ ಸಂಬಂಧಗಳಲ್ಲಿ ಇಂದು ಇದನ್ನೆಲ್ಲ ಅಪೇಕ್ಷಿಸುವಂತೆಯೇ ಕಂಡುಬರುವುದಿಲ್ಲ.ಇದಕ್ಕೆ ಹೊರತಾಗಿಯೂ ಇರುವವರು ನಮ್ಮೆಲ್ಲರ ನಡುವೆ ಇರುತ್ತಾರೆ.ಆದರೆ ಅವರು ನಮ್ಮ ಅನುಭವಕ್ಕೆ ಸಿಕ್ಕಿರಲಾರರು ಅಷ್ಟೇ.ಅಂತದ್ದೇ ಪಾತ್ರ ಈ ಕಾದಂಬರಿಯಲ್ಲಿರುವ ರಾಧಾಳದ್ದು.ಮಗುವಿನಂತಹ ಮುಗ್ಧತನ, ಎಲ್ಲರನ್ನೂ ಪ್ರೀತಿಸುವ ಸದ್ಗುಣ,ಇತರರಿಗೆ ತನ್ನಿಂದ ನೋವಿಗದಂತೆ ಎಚ್ಚರವಹಿಸುವ ಒಳ್ಳೆಯತನ,ಪ್ರಕೃತಿಯ ಚೆಲುವನ್ನು ಆಸ್ವಾಧಿಸುವ ನವಿರುತನಗಳಿಂದ ಓದುಗರಿಗೆ  ಹತ್ತಿರದ ಗೆಳತಿಯಾಗುತ್ತಾಳೆ.ಇದಕ್ಕೆಲ್ಲಾ ತದ್ವಿರುದ್ಧದ ಸ್ವಭಾವ ಕಮಲಳದ್ದು.ಒಡಹುಟ್ಟಿದವರ ರೂಪದಲ್ಲಿ, ಗುಣಗಳಲ್ಲಿ ವೈರುದ್ಯಗಳಿರಬಹುದು.ಆದರೆ ಎಲ್ಲಿಯೂ ಸಾಮ್ಯತೆಯನ್ನು ಕಾಣದೇ ಇರಲಾಗದು.ಇದು ಸಹಜ ಕೂಡ.ಹಾಗಿದ್ದರೆ ರಾಧಾ, ಕಮಲರ ನಡುವಿನ ಈ ಭಿನ್ನ ಗುಣಸ್ವಾಭಾವದ ಹಿಂದಿನ ರಹಸ್ಯವೇನು? ತಾಯಿಯಂತೆ ಮಗಳು ಎನ್ನುವ ನುಡಿಯೇನೋ ಸರಿ.ಆದರೆ ಸುಸಂಸ್ಕೃತ ವಾತಾವರಣದಲ್ಲಿ ಹುಟ್ಟಿ, ಹಾಗೆಯೇ ಜೀವಿಸಿದ ಸಾವಿತ್ರಮ್ಮ ಕಮಲಳ ವಿಷಯದಲ್ಲಿ ಅದೂ ಇಳಿವಯಸ್ಸಿಗೆ ಗಂಡನಿಂದ ಸಂಶಯಕ್ಕೊಳಗಾದ ಆಘಾತದ ಹಿಂದಿನ ಕಾರಣಗಳೇನು? ಈ ಎರಡು ವಿಷಯಗಳೆ ಈ ಕಾದಂಬರಿಯ ಮುಖ್ಯ ವಿಷಯಗಳು.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books