ಮರಾಠಿ ಮೂಲದ ಲೇಖಕ ವಿಶ್ವಾಸ್ ಪಾಟೀಲ ಅವರ ಮಹಾನಾಯಕ ಕೃತಿಯನ್ನು ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕಾದಂಬರಿ. ಸ್ವಾತಂತ್ಯ್ರ ಯೋಧ, ಆಜಾದ್ ಹಿಂದ್ ಸೇನೆ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನಾಯಕ ಸುಭಾಶಚಂದ್ರ ಭೋಸ್ ಅವರ ಜೀವನಾಧಾರಿತ ಕಾದಂಬರಿ. ಜೀವನ ವೃತ್ತಾಂತದ ನಿರೂಪಣೆ ಶೈಲಿಯಿಂದ ಸರಳವಾಗಿ ಮತ್ತು ಅತ್ಯಂತ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುವ ಕಾದಂಬರಿ ಇದು.ಈ ಮಹಾನಾಯಕನ ಅಂತ್ಯ ಕುರಿತು ಇರುವ ವದಂತಿಗಳು ಏನೇ ಇರಲಿ, ಈ ಮಹಾನಾಯಕನ ಬದುಕು ಸಾರ್ಥಕತೆ ಪಡೆದ ರೀತಿ ಮೈನವಿರೇಳಿಸುತ್ತದೆ.
©2023 Book Brahma Private Limited.