ರಾಜನರ್ತಕಿ

Author : ಗೊರೂರು ರಾಮಸ್ವಾಮಿ ಅಯ್ಯಂಗಾರ್

Pages 289

₹ 200.00




Year of Publication: 2020
Published by: ಐ ಬಿ ಎಚ್ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ 3ನೇ ಹಂತ, ಬೆಂಗಳೂರು- 560085

Synopsys

ಖ್ಯಾತ ಸಾಹಿತಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ ಅವರ ಅನುವಾದಿತ ಐತಿಹಾಸಿಕ ಕಾದಂಬರಿ-ರಾಮಚಂದ್ರ ಠಾಕೂರು ಅವರ ‘ಆಮ್ರಪಾಲಿ’ಯ ಕನ್ನಡಾನುವಾದ-ರಾಜನರ್ತಕಿ. ಇಂದಿನ ಬಿಹಾರ ರಾಜ್ಯದಲ್ಲಿ ಕ್ರಿ.ಶ. 500ರಲ್ಲಿ ವೈಶಾಲಿ ಎಂಬ ನಗರದಲ್ಲಿ ಆಮ್ರಪಾಲಿಯ ಜನನವಾಗಿದ್ದು, ಅಲ್ಲಿಯ ರಾಜನ ಆಸ್ತಾನದಲ್ಲಿ ರಾಜನರ್ತಕಿಯಾಗಿದ್ದವಳು. ವೈಶಾಲಿ ನಗರದಲ್ಲಿ ಆಮ್ರವನದಲ್ಲಿ (ಮಾವಿನ ತೋಟ) ಒಂದು ಹೆಣ್ಣು ಒಂಟಿಯಾಗಿತ್ತು. ಅಲ್ಲಿಯ ಶಿಕ್ಷಕ ಕುಮಾರಭಟ್ಟ ಎಂಬುವರು ಈ ಹೆಣ್ಣುಮಗುವನ್ನು ಎತ್ತಿಕೊಂಡು ಸಾಕಿದರು. ಮಾವಿನತೋಟದಲ್ಲಿ ಈ ಮಗು ಸಿಕ್ಕಿದ್ದರಿಂದ ಅವಳಿಗೆ ಆಮ್ರಪಾಲಿ ಎಂದು ನಾಮಕರಣ ಮಾಡಲಾಯಿತು. ರಾಜನ ಆಸ್ತಾನದಲ್ಲಿ ನೃತ್ಯ ಮಾಡುವುದಿಲ್ಲ ಎಂದು ಆಕೆ ತಂದೆ ಕುಮಾರಭಟ್ಟರಲ್ಲಿ ವಚನ ನೀಡಿದ್ದಳು. ಆದರೆ, ಒಂದು ದಿನ ವೇದಿಕೆ ಮೇಲೇರಿ ನೃತ್ಯದ ಸ್ಪರ್ಧಿಯಾದಾಗ ತಂದೆಗೆ ಆಘಾತವಾಯಿತು. ಇದರಿಂದ ಅವರು ನಗರವನ್ನು ತೊರೆದು ಹೋಗುತ್ತಾರೆ. ಆಕರ್ಷಕವಾಗಿ ನೃತ್ಯ ಮಾಡುತ್ತಾಳೆ. ನಗರವಧು ಮಾಡಬೇಕೆಂಬ ಒತ್ತಡ ರಾಜನ ಆಸ್ಥಾನದಿಂದ, ಜನಸಾಮಾನ್ಯರಿಂದಲೂ ಹೆಚ್ಚುತ್ತದೆ. ಇದಕ್ಕೆ ಒಪ್ಪದ ಆಮ್ರಪಾಲಿಯನ್ನು ಅಧೀರಗೊಳಿಸಲು ಆಕೆಯ ಗಂಡನನ್ನೂ ಕೊಲೆ ಮಾಡುತ್ತಾರೆ. ವೈಶಾಲಿ ನಗರದ ಶಾಂತಿಗಾಗಿ ಆಕೆ ನಗರವಧುವಾಗಲು ಸಮ್ಮತಿಸುತ್ತಾಳೆ. ಇಂತಹ ಕಥೆಯ ಹಂದವಿರುವ ಈ ಕಾದಂಬರಿಯು ತನ್ನ ವಸ್ತು, ನಿರೂಪಣಾ ಶೈಲಿ, ಸೂಕ್ತ ಅನುವಾದದ ಪ್ರಬುದ್ಧತೆಯಿಂದ ಓದುಗರ ಗಮನ ಸೆಳೆಯುತ್ತದೆ.

About the Author

ಗೊರೂರು ರಾಮಸ್ವಾಮಿ ಅಯ್ಯಂಗಾರ್
(04 July 1904 - 28 September 1991)

ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...

READ MORE

Related Books