ಬಯಲು

Author : ಅಮರೇಶ ಗಿಣಿವಾರ

Pages 45

₹ 35.00
Year of Publication: 2009
Published by: ಸುದ್ದಿಬಿಂಬ ಪ್ರಕಾಶನ
Address: ಸತ್ಕಲ್ ಹೋಟೆಲ್ ಬಳಿ, ಸಿಂದನೂರು, ರಾಯಚೂರು ಜಿಲ್ಲೆ.

Synopsys

ಅಮರೇಶ ಗಿಣಿವಾರ ಅವರ ಚೊಚ್ಚಲ ಕೃತಿ “ಬಯಲು” - ಬದುಕಿನ ಸುಳ್ಳು ಭರವಸೆ ಕಲ್ಪನೆಗಳನ್ನು ಆವರಣಗೊಳಿಸದೇ ವಾಸ್ತವ ಸತ್ಯಗಳನ್ನು, ಜೀವಂತ ಅನುಭವಗಳನ್ನು ಬಿಚ್ಚಿಟ್ಟ ಕೃತಿ. ನಡೆಯುತ್ತಿರುವೆ ನಾ ನಡೆಯುತ್ತಿರುವೆ ಎನ್ನುವ ಮೊದಲ ಕವಿತೆಯೊಂದಿಗೆ ಪ್ರಾರಂಭವಾಗುವ ಕವನ ನಿಜ ಜೀವನದಲ್ಲಿ ಯಾವ ರೀತಿ ನಡೆಯಬೇಕು, ಅಂತ್ಯವಿಲ್ಲದ ಪಯಣ ಎತ್ತ ಸಾಗಬೇಕು ಎಂಬ ತುಡಿತದಿಂದ ಶುರುವಾಗುತ್ತದೆ. 

“ನನ್ನವರು" ಎನ್ನುವ ಮತ್ತೊಂದು ಕವಿತೆಯಲ್ಲಿ ಈ ರಾಷ್ಟ್ರನಿರ್ಮಾಣದಲ್ಲಿ ಭಾಗಿಯಾದವರನ್ನು ಹೃದಯ ಸ್ಪರ್ಶಿಯಾಗಿ ಸ್ಮರಿಸಿದ್ದು ಎದ್ದು ಕಾಣುತ್ತದೆ.

ಸಂಕಲನದ ಶೀರ್ಷಿಕೆಯಾಗಿ ಮೆರಗು ಹೆಚ್ಚಿಸಿದ “ಬಯಲು" ಕವನವು, ಕವಿಯು ಎಲ್ಲವು ಬಯಲಿನಲ್ಲಿಯೇ ಬೆಳಕಾಗಬೇಕೆಂದು ಬಯಸಿದ್ದು ಹೀಗಿದೆ.

"ದೇಶ ಕಾಯುವ ವೀರ 

ಕಳಿಸಿಹನು ಸಂದೇಶವ 

ನಾ ಬಯಸಿ ಓದುವ ಬಯಲಿನಲಿ 

ಮಾತೆಯು ಮಮತೆಯ 

ತೋರಿಹಳು ಎನ್ನ ರಾಯನಿಗೆ 

ರಾಷ್ಟ್ರಸೇವಕನ ಭಾವನೆಯನು 

ನಾ ಬಯಸಿ ಓದುವ ಬಯಲಿನಲಿ.

 

ಜೋಗಿಯರು ನಾವಲ್ಲಾ 

ದೇವರಿಗೆ ಮೀಸಲು 

ದಾಸಿಯರು ನಾವೆಲ್ಲಾ 

ದೇವರಿಗೆ ಮೀಸಲು 

ಬಂಡಾರ ಹೆಚ್ಚಿಕೊಂಡು

ಭಂಡೆದ್ದು ಕುಣಿದೇವು..." - ಎನ್ನುವ ಕಾವ್ಯವು ದೇವದಾಸಿಯರ ಸ್ಥಿತಿಗತಿ ಈ ಸಮಾಜದ ಅನಿಷ್ಟ ಆಚರಣೆಗಳು ಗೊಡ್ಡು ಸಂಪ್ರದಾಯಗಳ ಮೇಲೆ ಬೆಳಕು ಚೆಲ್ಲಿದೆ. ಹಾಗೂ ಬಾಳ ಸಂಗಾತಿಯ ಅನ್ವೇಷಣೆಯ ಈ ತುಂಬು ಯೌವನದಲ್ಲಿರುವ ಪ್ರಾಯದ ಕವಿ ಅಮರೇಶ ಗಿಣಿವಾರ ಅವರು ತಮ್ಮ ಕಾಡುವ ಕನಸು, ನೆನಪುಗಳನ್ನು ’ಎಲ್ಲಿರುವೆ ನನ್ನ ಗೆಳತೆ’ ಎನ್ನುವ ಕವಿತೆಗಳಿಂದ ಪ್ರೇಮದ ಸಿಂಚನಗೈದು ಪ್ರೇಮಿಗಳಲ್ಲಿ ಕೊಂಚ ಬಿಸಿ ಭಾವನೆಯ ರೋಮಾಂಚನ ಮೂಡಿಸಿದ್ದಾರೆ.

About the Author

ಅಮರೇಶ ಗಿಣಿವಾರ
(01 June 1989)

ಸ್ಪಂದನೀಯ ಕಥೆಗಾರ, ಕವಿ ಅಮರೇಶ ಗಿಣಿವಾರ ಅವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಿಣಿವಾರ ಎಂಬ ಗ್ರಾಮದಲ್ಲಿ 1989 ಜೂನ್ 01 ರಂದು ಜನಿಸಿದರು. ಅವರ ಮೊದಲ ಕವನ ಸಂಕಲನ "ಬಯಲು" 2009 ರಲ್ಲಿ ಪ್ರಕಟಣೆ ಕಂಡಿದ್ದು ಮೊಟ್ಟಮೊದಲ ರಾಜ್ಯ ಮಟ್ಟದ ಯುವ ಕಥಾ ಸ್ಪರ್ಧೆಯಲ್ಲಿ ಬಹುಮಾನ ಹಾಗೂ "ಹಿಂಡೆಕುಳ್ಳು" ಕಥೆಗೆ ಸಂಗಾತ ಬಹುಮಾನಗಳು ಲಭಿಸಿದೆ.   ಕರ್ನಾಟಕ ವಿಶ್ವವಿದ್ಯಾಲಯದಿಂದ ಬಾಹ್ಯ ಶಿಕ್ಷಣ ಪದವಿ ಪಡೆದಿದ್ದಾರೆ. 2008ರಲ್ಲಿ ಅಂಚೆ ಇಲಾಖೆಯಲ್ಲಿ ಅಂಚೆ ಸಹಾಯಕನಾಗಿ ನೇಮಕಗೊಂಡು ಪ್ರಸ್ತುತ ತುರುವಿಹಾಳ ಅಂಚೆ ಕಛೇರಿಯಲಿ ಉಪ ಅಂಚೆ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮ್ತತಿತರ ಕತೆ ...

READ MORE

Related Books