ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..

Author : ವಿವೇಕಾನಂದ ಕಾಮತ್

Pages 156

₹ 150.00




Year of Publication: 2016
Published by: ಪಾಂಚಜನ್ಯ ಪಬ್ಲಿಕೇಷನ್ಸ್
Address: ನಂ 1, ಮಿಲ್ಕ್ ನರಸಿಂಹಯ್ಯ ಲೇ ಔಟ್, ಎನ್ . ಆರ್ . ಐ . ಇನ್ ಸ್ಟಿಟ್ಯೂಟ್ ಹತ್ತಿರ, ಪಾಪರೆಡ್ಡಿ ಪಾಳ್ಯ , ಬೆಂಗಳೂರು - 560072
Phone: 9740066842

Synopsys

ಗಂಡನ ಮನೆಯಲ್ಲಿ ಸುಖಾವಾಗಿ ಬದುಕಲಿ ಎಂದು ಹಾರೈಸಿ ಮಗಲನ್ನು ಗಂಡನ ಮನೆಗೆ ಕಳಿಸಿದ ಹೆತ್ತವರಿಗೆ, ಆಕೆ ಅಲ್ಲಿ ಸುಖವಾಗಿಲ್ಲ ಎಂಬ ಸತ್ಯ ಅರಿತರೆ ಹೇಗಾಗಬೇಡಾ..? ಮಗಳ ಬದುಕು ಮುಗಿದೇ ಹೋಯಿತು ಎಂದು ಕೊರಗಿ ಅಲ್ಲೇ ಅವಳನ್ನು ವ್ಯಕ್ತಿತ್ವ ಇಲ್ಲದವಳಂತೆ ಕೊಳೆಯಲು ಬಿಡದೇ , ವಿವಾಹ ಮಾಡಿ ಕೊಟ್ಟಂತೇ ಮರಳಿ ಮನೆಗೆ ತಂದು ವಿಚ್ಛೇಧನ ಕೊಡಿಸಿ ಮರುಬಾಳು ಕಟ್ಟಿಕೊಡುವ ಗಟ್ಟಿಗಿತ್ತಿ ತಾಯಿಯ ಪಾತ್ರದ ಚಿತ್ರಣ ಈ ಕಾದಂಬರಿಯಲ್ಲಿದೆ. ಸಖಿ ಪಾಕ್ಷಿಕದಲ್ಲಿ ಧಾರವಾಹಿಯಾಗಿ ಪ್ರಕಟಗೊಂಡ ಕಾದಂಬರಿ ಇದು.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books