ಉಷೋದಯ

Author : ಮಿಸ್ ಸಂಪತ್‌

Pages 108

₹ 65.00




Year of Publication: 2009
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022161900

Synopsys

ಉಷೋದಯ ಕೃತಿ ಮೇಲು-ಕೀಳು ವಿಚಾರದ ಕುರಿತ ಜನರಲ್ಲಿರುವ ಮನೋಭಾವದ ಸಹಜತೆಯನ್ನು ವಿವರಿಸುತ್ತದೆ. ಮಹಿಳಾ ಜೀವನ ಕಥನಗಳನ್ನು ಚಿತ್ರಿಸಿರುವ ʼಉಷೋದಯʼ ಆಂಧ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ಕಾದಂಬರಿ.  ದುರ್ಗಾಪುರದಲ್ಲಿ ಪಂಚಾಯಿತಿ ಆಫೀಸು ಕಟ್ಟಿಸುವ ವಿಷಯದಲ್ಲಿ ಊರಿನ ಹರಿಜನ ಮತ್ತು ಇತರ ಮೇಲು ಜಾತಿಯವರ ಮಧ್ಯೆ ಉಂಟಾಗುವ ತಕಾರರು ಹೇಗೆ ತೀವ್ರ ಸ್ವರೂಪ ತಾಳುತ್ತದೆ ಎಂಬುದನ್ನು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. ಪಾಳೆಗಾರಿಕೆಯ ಗತ್ತು, ಆಧುನಿಕ ರಾಜಕೀಯ ಮನೋಭಾವದ ಜನ, ಊರಿನ ಗಂಡಸರು ದರ್ಪದ ಮಂದಿ, ಹೆಂಗಸರ ದುಡಿಮೆಯ ಫಲವನ್ನು ಉಣ್ಣುತ್ತ ಕಾಡುಹರಟೆ, ಕುಡಿತ- ಜೂಜು ಇತ್ಯಾದಿ ಮೋಜಿನಲ್ಲಿ ಕಾಲ ಕಳೆಯುವವರು, ಜಗಳ, ಸೇಡು, ಕೊಲೆ ಇವುಗಳನ್ನೆ ಹವ್ಯಾಸವನ್ನಾಗಿಸಿದ್ದ ಜನರ ಕುರಿತ ವಿಚಾರಧಾರೆಗಳು ಈ ಪುಸ್ತಕದಲ್ಲಿದೆ.  ಊರಿನ ಎಲ್ಲ ಜಾತಿಯ ಹೆಂಗಸರಿಗೆ ಅತ್ಯಗತ್ಯವಾಗಿ ಬೇಕಾಗಿದ್ದುದು ಪಾಯಿಖಾನೆ. ಆದರೆ ಮುಂಜಾನೆ ಅವಸರವಿಲ್ಲದೆ ಆರಾಮವಾಗಿ ಮಲವಿಸರ್ಜನೆ ಮಾಡಲು ಸರಿಯಾದ ಸ್ಥಳ ಇರದೆ ಇದ್ದಾಗ ಹುಡುಗಿಯೊಬ್ಬಳು ಇದರ ಕುರಿತು ಸ್ವರ ಎತ್ತುತ್ತಾಳೆ. ಆಕೆ ಗೆಳತಿಯರ ಜೊತೆಗೂಡಿ ಊರಿನಲ್ಲಿ ಪಾಯಿಖಾನೆಗಳನ್ನು ಕಟ್ಟಿಸಿದ ಹಾಗೂ ಅವಳಿಗಿದ್ದ ಮಹಿಳೆಯರ ಬೆಂಬಲದ ಕುರಿತ ಕಥಾವಸ್ತುವೇ ಈ ಕಾದಂಬರಿಯಾಗಿದೆ., ಇದೊಂದು ಕನ್ನಡಕ್ಕೆ ಅನುವಾದಿಸಿದ ಕಾದಂಬರಿಯಾಗಿದೆ ಎಂದು ಮಿಸ್‌ ಸಂಪತ್‌ ಕಾದಂಬರಿಯ ಕುರಿತು ವಿವರಿಸಿದ್ದಾರೆ. 

Related Books