ಎಲ್ಲಿಯೂ ನಿಲ್ಲದಿರು

Author : ಟಿ.ಡಿ.ರಾಜಣ್ಣ ತಗ್ಗಿ

Pages 230

₹ 225.00




Year of Publication: 2020
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: #176, 12ನೇ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ಮಾಗಡಿ ಮುಖ್ಯರಸ್ತೆ, ಬೆಂಗಳೂರು- 560079
Phone: 9880802551

Synopsys

‘ಎಲ್ಲಿಯೂ ನಿಲ್ಲದಿರು’ ಕೃತಿಯು ಪ್ರಪಂಚದ ಅತ್ಯಂತ ಮಹತ್ವದ ಲೇಖಕ-ಚಿಂತಕರಲ್ಲಿ ಒಬ್ಬನಾದ ಫ್ರೆಡರಿಕ್ ನೀಷೆ ಬರೆದ ‘ದಸ್ ಸ್ಪೋಕ್ ಜರತೋಸ್ತ್ರ’ಎಂಬ ತಾತ್ವಿಕ ಕೃತಿಯ ಅನುವಾದ. ಲೇಖಕ ಟಿ.ಡಿ. ರಾಜಣ್ಣ ತಗ್ಗಿ ಅನುವಾದಕರು. 

ಇದು ಅತ್ಯಂತ ಪ್ರಬುದ್ಧ ಮತ್ತು ಪ್ರತಿಭಾವಂತರು ಮತ್ತು ಚಿಂತಕರು ಅಗತ್ಯವಾಗಿ ಪರಿಗಣಿಸಲೇಬೇಕಾದ ವಿನೂತನ ಚಿಂತನಾಕ್ರಮಗಳ ಪುಸ್ತಕ. ಸಾಮಾನ್ಯರಲ್ಲಿ ಅತಿಸಾಮಾನ್ಯರು, ಮೇಧಾವಿಗಳಲ್ಲಿ ಅತಿ ಮೇಧಾವಿಗಳು ನಂಬಿದ ಮೌಲ್ಯಗಳನ್ನು ಒಡೆದು ಹಾಕುವ, ದೇವರು, ಧರ್ಮ, ನಂಬಿಕೆ, ಪರಂಪರೆ, ನೈತಿಕತೆ, ಇತಿಹಾಸ ಅಷ್ಟೇ ಅಲ್ಲದೆ ಸಾಮಾಜಿಕ, ವೈಯಕ್ತಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳನ್ನು ಗೇಲಿ ಮಾಡುತ್ತಾ, ಜನರಲ್ಲಿ ದಿಗ್ಭ್ರಮೆ, ಸಂಚಲನ, ಆಘಾತ, ಅರಾಜಕತೆ ಎಲ್ಲವನ್ನೂ ಏಕಕಾಲದಲ್ಲಿಯೇ ಉಂಟುಮಾಡುವ ಆಗಾಧ ಪ್ರತಿಭಾ ಕೃತಿ. ಇದು ಜನಪ್ರಿಯ, ಲೋಕಪ್ರಿಯ, ವಿಶ್ವಮಾನ್ಯ, ಸಾರ್ವಕಾಲಿಕ ಎಂದು ಕರೆಯುವ ಎಲ್ಲ  ಸಿದ್ಧಾಂತಗಳನ್ನು, ವಿಚಾರಗಳನ್ನು ಮತ್ತು ಸಂಕಥನ ಗಳನ್ನುನಿರ್ದಾಕ್ಷಿಣ್ಯವಾಗಿ ಛಿದ್ರಿಗೊಳಿಸುವ ಕೃತಿ ಎಂದು ಕೃತಿಗೆ ಬೆನ್ನುಡಿ ಬರೆದ ಲೇಖಕ ಬಸವರಾಜ ಡೋಣೂರ ಪ್ರಶಂಸಿಸಿದ್ದಾರೆ. 

.

About the Author

ಟಿ.ಡಿ.ರಾಜಣ್ಣ ತಗ್ಗಿ

ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.   ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...

READ MORE

Related Books