
19ನೇ ಶತಮಾನದ ಊಳಿಗಮಾನ್ಯ ರಷ್ಯಾದ ಹಿನ್ನೆಲೆಯಲ್ಲಿ ಸಂತ ಪೀಟರ್ಸ್ ಬರ್ಗ್‌ನ ಕುಲೀನ ಮನೆತನಕ್ಕೆ ಸೇರಿದ ’ಅನ್ನಾ ಕರೆನಿನ’ ಬದುಕಿನ ಸೌಂದರ್ಯ ಘನತೆ ಬಿಕ್ಕಟ್ಟುಗಳನ್ನು ತೆರೆದಿಡುತ್ತದೆ. ಸೇಂಟ್ ಪೀಟರ್ ಬರ್ಗ್‌ನ ಕುಲೀನ ಮನೆತನಕ್ಕೆ ಸೇರಿದ ’ಅನ್ನಾ ಕರೆನಿನ’ಳ ಬದುಕಿನ ಸೌಂದರ್ಯ, ಘನತೆ ಹಾಗೂ ಬಿಕ್ಕಟ್ಟು, ವರ್ತನೆಯ ಸೂಕ್ಷ್ಮಗಳು, ಮಾನವ ಬದುಕಿನ ಅರ್ಥಪೂರ್ಣತೆ, ವಿಪರ್ಯಾಸ, ದುರಂತ, ರಷ್ಯಾದ ರೈತವರ್ಗ, ಸಿರಿವಂತ ವರ್ಗ, ಆಧ್ಯಾತ್ಮ, ಶಿಕ್ಷಣ, ಸುಧಾರಣೆ, ಮಹಿಳಾ ಹಕ್ಕುಗಳು, ಕುಟುಂಬ, ಮದುವೆ ಮುಂತಾದ ಪ್ರಮುಖ ಅಂಶಗಳ ಕುರಿತು ಈ ಕೃತಿಯಲ್ಲಿ ವಿವರಿಸಿದ್ದಾರೆ. ರಷ್ಯಾದ ಪ್ರಖ್ಯಾತ ಕಾದಂಬರಿಕಾರ ಲಿಯೋ ಟಾಲ್ ಸ್ಟಾಯ್ ಅವರ ’ಅನ್ನಾ ಕರೆನಿನ’ ಕಾದಂಬರಿಯನ್ನು ತೇಜಶ್ರೀ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
©2025 Book Brahma Private Limited.