ವಸಂತ ಚಿಗುರು

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 198

₹ 144.00




Year of Publication: 2018
Published by: ಸುಧಾ ಎಂಟರ್‌ಪ್ರೈಸಸ್‌
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560070
Phone: 98454 49811

Synopsys

ಮಂದಾರ ಕುಸುಮ’ದ ಮುಂದಿನ ಭಾಗ ‘ವಸಂತದ ಚಿಗುರು’.ಮಂದಾರ ಕುಸುಮದಲ್ಲಿ ಅನಾಥೆಯಾಗಿದ್ದ ಉಮಾಳ ಬಾಳು ಭಧ್ರವಾಗುವುದೇ  ಎಂಬ ಪ್ರಶ್ನೆಯನ್ನು ಮೂಡಿಸುತ್ತಲೇ ಈ ಕೃತಿ ಮುಂದೆ ಸಾಗುತ್ತದೆ. ಯಾರ ಪಾಲಿನ ಮಂದಾರ ಕುಸುಮ? ಯಾರ ಪಾಲಿನ ವಸಂತದ ಚಿಗುರು.ತಾತ್ಕಾಲಿಕ ಅಮಲು! ಅದು ಯಾವಾಗ ಬರುವುದು? ಅದು ಯಾವಾಗ ಇಳಿಯುವುದು? ತನಗೆ ದೊರಕಿರುವುದರ ಮಹತ್ವ ತಿಳಿಯದೆ ಇದ್ದಾಗ ಅದರ ಮೌಲ್ಯ ಖಂಡಿತಾ ಗೊತ್ತಾಗುವುದಿಲ್ಲ..  ಆದುದರಿಂದ ನಾವು ಅದಕ್ಕಿಂತಲೂ ಉತ್ತಮವಾದುದುರ ಕಡೆ ಗಮನ ಹರಿಸುತ್ತೇವೆ.ಕತ್ತಲಲ್ಲಿ ಕಾಲಿಡುತ್ತಾ ಇರೋದು ನೀರಿಗೋ ಕೊಳಚೆಗೋ ಅರಿವಿರದ ನಡಿಗೆ, ಗಬ್ಬು ಹರಡಿದಾಗಲೇ ಅದರತ್ತ ಲಕ್ಷ್ಯ, ಆದರೆ ಏನು ಪ್ರಯೋಜನ? ಕಾಲುಗಳನ್ನಾದರೂ ತೊಳೆಯಬಹುದು.. ಆದರೆ ರಾಡಿಯಾಗಿರುವ ಪ್ರೀತಿ, ಮನಸ್ಸು, ಹೃದಯ, ಜೀವಗಳು! ನಶೆ ಇಳಿದಾಗ ಸತ್ಯ ಸಂಗತಿ ತಿಳಿದರೂ ಏನೂ ಮಾಡುವಂತಿಲ್ಲ, ತಾನು ಹಿಂತಿರುಗಿ ಸಾಗಬಹುದು, ಇನ್ನೊಂದು ಜೀವಕ್ಕಾದ ಗಾಯ ಮಾಸಿಹೋಗದು..ಮೊದ್ದು ಎಂದು ಉಮಾಳನ್ನು ತಿರಸ್ಕರಿಸಿದ್ದ ಮಹೇಶನ ಹೃದಯದಲ್ಲಿ ಇಂದಿಗೂ ಅವಳಿಗೆ ಜಾಗವಿದೆ! ವಿಚಿತ್ರವೆಂದರೆ ಅವಳ ಹೃದಯದಲ್ಲಿ ಅವನಿಗೆ  ಕೂಡ ಸ್ಥಾನವಿದೆ! ಹೆತ್ತವರು ಸಸಿಯಾಗಿ ನೆಟ್ಟದ್ದು ಹೆಮ್ಮರವಾಗಿ ಬೆಳೆದಿತ್ತು ಅದರಿಂದಲೇ ಅವಳು ಸೇಡು ತೀರಿಸಿಕೊಳ್ಳದಂತೆ ಮಾಡಿತ್ತು.ತನ್ನಳಿಯ ಮಹೇಶ ಮಾಡಿದ ಉದ್ಧಟತನಕ್ಕೆ ಪ್ರತಿಯಾಗಿ ಉಮಾಳ ಜೀವನವನ್ನು ಸರಿಯಾದ ದಿಕ್ಕಿಗೆ ಬದಲಿಸುವ ಪ್ರಯತ್ನಪಡುವ ರಾಜೇಂದ್ರಕುಮಾರ್, ಅವರ ಪತ್ನಿ ಲೀಲಾವತಿ, ಊರ ಗೌಡ್ರು ಇವರ ಪಾತ್ರಗಳು ಈ ಕೃತಿಯಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ. ಹಾಗೋ ಹೀಗೋ ಬಲವಂತದಿಂದ ಸಂಜಯನ ಮಡದಿಯಾಗುವ ಉಮಾ, ಮುಂದೇನು? ಅವಳ ಪ್ರಶ್ನೆ ಮಾತ್ರವಲ್ಲ, ಓದುಗರಿಗೂ ಪ್ರಶ್ನೆಗಳೇ!! ಅವಳ ಬಾಳನ್ನು ಹಾಳುಗೆಡವಲು ಹಸಿದ ಹುಲಿಗಳಂತೆ ನಿಂತಿರುವ ಸುಷ್ಮಾ, ಮಣಿ, ರಾಧಮ್ಮ, ಇವರುಗಳಿಂದ  ರಕ್ಷಣೆ ಒದಗಿಸಲು ಪಣತೊಟ್ಟಿರುವ ಮಹೇಶ, ಮನೋಹರ, ರಾಜೇಂದ್ರಕುಮಾರ್, ಗೌಡ್ರು, ಲೀಲಾವತಿ…ಕಥೆಸಾಗುತ್ತಾ ಸಾಗುತ್ತಾ ಬೆಳಕು ಮೂಡುವುದೇ? ಹೀಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಕೃತಿ ಯಶಸ್ವಿಯಾಗಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books