ಮುಂಗಾರಿನ ಹುಡುಗಿ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 228

₹ 135.00




Year of Publication: 2001
Published by: ಸುಧಾ ಎಂಟರ್ ಪ್ರೈಸಸ್

Synopsys

ಕಾದಂಬರಿಕಾರ್ತಿ ಸಾಯಿಸುತೆ ಸಾಮಾಜಿಕ ಕಾದಂಬರಿ ಮುಂಗಾರಿನ ಹುಡುಗಿ. ಬರಿ ಮಾತಾಡಿದ್ದರೆ ನಾನು ಇಲ್ಲಿಯವರೆಗೂ ಬರಬೇಕಿರಲಿಲ್ಲ. ನಿಮ್ಮ ಮಗ ನನ್ನ ಮಗಳ ಮನಸ್ಸು ಹೃದಯನ ಮುಟ್ಟಿದ್ದಾನೆ. ಇನ್ನೊಂದು ಮಾತು ಬೇಡ. ದಯವಿಟ್ಟು ನಿಮ್ಮ ಸೊಸೆಯಾಗಿ ಸ್ವೀಕರಿಸಿ ಶಂಕರಯ್ಯನವರೇ ಇದನ್ನ ಸಿಂಧುವಿನ ತಂದೆ ಹೇಳಿದ್ದು. ಹೃದಯ ಮನಸ್ಸುಗಳ ಶ್ರೇಷ್ಠತೆಯ ಜೊತೆ ಅದರ ನೆಲೆ-ಬೆಲೆಗಳನ್ನ ಎತ್ತಿ ಹಿಡಿಯಲು ಪ್ರತಿಯೊಂದು ಪಾತ್ರಗಳು ಪ್ರಯತ್ನ ಮಾಡಿವೆ. ಅದಕ್ಕೆ ಬೇಕಾಗುವ ಕಲಾತ್ಮಕತೆ, ವಿಶೇಷತೆ, ಸೂಕ್ಷ್ಮತೆಯ ನಿರೂಪಣೆಯ ಕಾದಂಬರಿ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books