ಒಂದು ನೂರು ವರ್ಷಗಳ ಏಕಾಂತ

Author : ವಿಜಯಾ ಸುಬ್ಬರಾಜ್

Pages 410

₹ 400.00




Year of Publication: 2015
Published by: ಸೃಷ್ಟಿ ಪಬ್ಲಿಕೇಷನ್ಸ್

Synopsys

ಪತ್ರಕರ್ತ ಗ್ಯಾಬ್ರಿಯೆಲ್ ಮಾರ್ಕೆಜ್ ಸಾಹಿತ್ಯಲೋಕ ಕಂಡ ಪ್ರಮುಖ ಕಾದಂಬರಿಕಾರ. ’ಮಾಂತ್ರಿಕ ವಾಸ್ತವವಾದ’ ಎಂಬ ಹೊಸ ಶೈಲಿ-ಪ್ರಕಾರವನ್ನೇ ಹುಟ್ಟು ಹಾಕಿದವ. ವಾಸ್ತವಿಕತೆ-ಮಾಂತ್ರಿಕತೆಗಳೆರಡನ್ನೂ ಬೆಸೆದ ಲೇಖಕ. ನೊಬೆಲ್ ಸಾಹಿತ್ಯ ಪುರಸ್ಕಾರ ಪಡೆದಿದ್ದ ಮಾರ್ಕೆಜ್ ನ ಕಾದಂಬರಿಗಳ ಪೈಕಿ ’ಒಂದು ನೂರು ವರ್ಷಗಳ ಏಕಾಂತ’ ಅತ್ಯಂತ ಜನಪ್ರಿಯವಾದದ್ದು. ಮಾರ್ಕೆಜ್ ನ ಈ ಜನಪ್ರಿಯ ಕಾದಂಬರಿಯನ್ನು ಅನುವಾದಕಿ ವಿಜಯಾ ಸುಬ್ಬರಾಜ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಮನಮುಟ್ಟುವ ಸತ್ಯ, ಅನುಕಂಪ, ಕಾವ್ಯಾತ್ಮಕ ಮಾಂತ್ರಿಕತೆಯ ಲೋಕವೇ ಈ ಕಾದಂಬರಿಯಲ್ಲಿ ಅನಾವರಣಗೊಂಡಿದೆ. 'ಒಂದು ನೂರು ವರ್ಷಗಳ ಏಕಾಂತ' ಲ್ಯಾಟಿನ್ ಅಮೇರಿಕಾದ ಗುಡ್ಡದ ತಪ್ಪಲು ಪ್ರದೇಶದ ಹಳ್ಳಿಯಲ್ಲಿ ನಡೆಯುವ ಕತೆ. ವ್ಯಸನ, ಕ್ರೌರ್ಯ, ಪ್ರೇತಗಳ ಮತ್ತು ಕನಸುಗಳನ್ನು ಒಳಗೊಂಡ ಕಲ್ಪನಾ ಕಾವ್ಯ ಈ ಕತೆಯಲ್ಲಿ ಒಡಮೂಡಿದೆ. ಮಾರ್ಕೆನ ಬರವಣಿಗೆಯ ಹೆಣಿಗೆಯು ರೂಢಿಗತ ಮಾದರಿಯ ಕ್ರಮವಾದ ಕಾಲಗತಿಯಲ್ಲಿ ಇರುವುದಿಲ್ಲ. ಅತಿಲೌಕಿಕಕತೆ ಹಾಗೂ ನಿತ್ಯದ ಜೀವನಗಳೆರಡನ್ನೂ ಸೇರಿಸಿ ಕತೆ ಕಟ್ಟುವ ಕಾರಣಕ್ಕಾಗಿ ಪ್ರಪಂಚ ಮಾರ್ಕೆಜ್ ಗೆ ಮಾರುಹೋಗಿದೆ. 'ಮಾಂತ್ರಿಕ ವಾಸ್ತವವಾದ'ದ ಬಗ್ಗೆ ಕುತೂಹಲ ಆಸಕ್ತಿ ಮೂಡಲು ಕಾರಣವಾದದ್ದು ಮಾರ್ಕೆಜ್ ಬರವಣಿಗೆಗಳು. ಪದಗಳ ಸೊಗಸಾದ ಬಳಕೆಯಿಂದ ಕ್ಷುಲ್ಲಕ ಎನಿಸುವ ಘಟನೆಯನ್ನು ವೈಭವೀಕರಿಸುವ ಮಾರ್ಕೆಜ್ ಘನವಾದ- ಪವಿತ್ರವಾದ ಸಂಗತಿಯನ್ನು ಕ್ಷುಲ್ಲಕವಾಗಿಸುವ ಹಾಗೆ ಬರೆಯುತ್ತಾನೆ. ಅತಿ ಸಣ್ಣ ಘಟನೆ ಕೂಡ ಅವನ ಕೈಯಲ್ಲಿ ಜೀವಸೆಲೆ ಉಕ್ಕಿಸುವ ಮಹಾಕಾವ್ಯವಾಗುತ್ತದೆ. 

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Conversation

Related Books