
ಮಧುರ ಆರಾಧನ ಕಾದಂಬರಿಯೂ ಆಧುನಿಕತೆ ಎಂಬ ಮಾರಕ ರೋಗಕ್ಕೆ ಗುರಿಯಾದ ಮಾನವ ತಮ್ಮ ಕುಟುಂಬದವರಿಗೆ ಹೇಗೆ ಸಮಯ ಕೊಡಲು ಹಿಂಜರಿಯುತ್ತಾನೆ ಎಂಬೆಲ್ಲಾ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುತ್ತಾ ಮುಂದೆ ಸಾಗುತ್ತದೆ. ಸಮಾಜದಲ್ಲಿ ತನ್ನ ಸ್ಥಾನ, ಅಧಿಕಾರ ಹೆಚ್ಚಿಸಲು ಮನುಷ್ಯ ಮರ್ಯಾದೆ ಹೆಚ್ಚಿಸಲು ಮಾಡುವ ಪ್ರಯತ್ನ ಅದಕ್ಕೆ ಆತ ಅನುಭವಿಸುವ ದಾರಿ, ಈಗಿನ ಯಾಂತ್ರಿಕ ಬದುಕಿನಲ್ಲಿ ಮನುಷ್ಯ ತನ್ನ ಕುಟುಂಬಕ್ಕೆ, ಕೌಟುಂಬಿಕ ಮೌಲ್ಯಗಳಿಗೆ ಒತ್ತು ಕೊಟ್ಟಾಗ,ಅದರಿಂದ ಉಂಟಾಗುವ ಸ್ವಂತ ಖುಷಿ ಇವೆಲ್ಲವನ್ನೂ ಈ ಕಾದಂಬರಿಯೂ ಚರ್ಚಿಸುತ್ತದೆ.
©2025 Book Brahma Private Limited.