ಯಾರದೀ ಕಾಡು

Author : ಬಿ. ಸುಜ್ಞಾನಮೂರ್ತಿ

Pages 314

₹ 150.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560098
Phone: 122 - 23183311, 23183312

Synopsys

ಬಿ. ಸುಜ್ಞಾನಮೂರ್ತಿ ಈವರೆಗೆ 40 ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ತಂದಿದ್ದಾರೆ. ಮಹಾಶ್ವೇತಾದೇವಿ ಅವರ ‘ಯಾರದೀ ಕಾಡು’ ಕಾದಂಬರಿಯ ಅನುವಾದಕ್ಕೆ  2003 ರಲ್ಲಿ  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸೃಜನಶೀಲ ಭಾಷಾಂತರ ವಿಭಾಗದಲ್ಲಿ ಪುಸ್ತಕ ಬಹುಮಾನ ಲಭಿಸಿದೆ. ಈ ಕಾದಂಬರಿಯೂ  ಮುಂಡಾ ಬುಡಕಟ್ಟು ಜನರ ಹೋರಾಟಗಳ ಕುರಿತು ವಿವರಿಸುತ್ತದೆ. ಬುಡಕಟ್ಟು ಜನರ ದೈನಂದಿನ ಬದುಕು, ಅವರ ಸಮಸ್ಯೆಗಳನ್ನು  ವಿವರಿಸುತ್ತದೆ.

ಮುಂಡಾ ತನ್ನ ಜನರ ಹಕ್ಕುಗಳಿಗಾಗಿ ಬ್ರಿಟಿಷರ  ಆಡಳಿವನ್ನು ವಿರೋಧಿಸಿ ಅವರ ವಿರುದ್ದ ಹೋರಾಡಿ, ಅವರ ಸಂಚಿಗೆ ಬಲಿಯಾಗಿ ನ್ಯಾಯ ದೊರೆಯದೆ, ಕೊನೆಗೆ ಸೆರೆಮನೆಯಲ್ಲೇ ಕೊಲೆಯಾದವನು. ಜನರು ಅವನನ್ನು ದೇವರಸ್ಥಾನಕ್ಕೆ ಏರಿಸಿ ಪ್ರಸ್ತುತ  ಆಡಳಿತ ಅವನನ್ನು ಜನ ನಾಯಕನೆಂದು ಪರಿಗಣಿಸಿ ಪ್ರತಿಮೆ, ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಅರಣ್ಯ ಯಾರದು? ಈ ಪ್ರಶ್ನೆ ಎಷ್ಟೋ ಶತಮಾನಗಳಿಂದ ಅರಣ್ಯದೊಡನೆ ಬದುಕುತ್ತಿರುವ ಬುಡಕಟ್ಟು  ಜನರ ಅಳಲಿದೆ. ರಾಜ್ಯಾಡಳಿತ ಲೂಟಿಕೋರರು ಈ ಲೂಟಿಕೋರರಿಗೆ ಪೊಲೀಸರ ಕಾವಲುಗಾರಿಕೆ ಹೀಗೆ ವಿವಿಧ ಸ್ತರದಲ್ಲಿ ಚರ್ಚಿತವಾಗಿರುವ ಹಲವು ಪ್ರಮುಖ ಅಂಶಗಳನ್ನು ’ಯಾರದೀ ಕಾಡು’ ಎಂಬ  ಕಾದಂಬರಿಯಲ್ಲಿ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. 
 

About the Author

ಬಿ. ಸುಜ್ಞಾನಮೂರ್ತಿ
(06 July 1960)

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...

READ MORE

Related Books