ಚಿರಸ್ಮಿತ

Author : ಯತಿರಾಜ್‍ ವೀರಾಂಬುಧಿ

₹ 150.00




Published by: ಚಾರುಮತಿ ಪ್ರಕಾಶನ
Address: ಚಾರುಮತಿ ಪ್ರಕಾಶನ, ಬೆಂಗಳೂರು

Synopsys

ಸಾಮಾನ್ಯವಾಗಿ ತಮ್ಮ ಕೃತಿಗಳಲ್ಲಿ ಜೀವನಾನುಭವ, ಸಾಮಾಜಿಕ ಮೌಲ್ಯ, ಆದರ್ಶಗಳನ್ನು ಪ್ರಚುರ ಪಡಿಸುವ ಯತಿರಾಜ್‍ ಅವರು, ತಮ್ಮ ಬರೆವಣಿಗೆಯಲ್ಲಿ ಜೀವನದ ಹಲವು ಮಜಲುಗಳನ್ನು ಬಹಳ ಸುಂದರವಾಗಿ ವರ್ಣಿಸುತ್ತಾರೆ. ಈಗಿನ ಕಾದಂಬರಿ ಚಿರಸ್ಮಿತ ಕೂಡ ಓದಗರನ್ನು ಮೊದಲಿಂದ ಕೊನೆಯವರೆಗೂ ಓದಿಸಿಕೊಂಡು ಹೋಗುವುದರಲ್ಲಿ ಸಂಶಯವಿಲ್ಲ. ಸಾಮಾಜಿಕ ವಿಷಯಗಳನ್ನು ಕಣ್ಣಿಗೆ ಮುಟ್ಟುವ ರೀತಿಯಲ್ಲಿ ವಿವರಿಸುವ ಯತಿರಾಜ್‍ ಅವರ ಬರೆವಣಿಗೆಯ ಶೈಲಿ ಈ ಪುಸ್ತಕದಲ್ಲಿ ಎದ್ದು ಕಾಣುತ್ತಿದೆ. ಕಾದಂಬರಿಯಲ್ಲಿನ ಪಾತ್ರಗಳನ್ನು ಮತ್ತು ಪಾತ್ರಗಳೊಂದಿಗೆ ಹೊಂದಿಕೊಂಡಿರುವ ಸನ್ನಿವೇಶಗಳನ್ನು ಬಹಳ ಸೂಕ್ಷ್ಮವಾಗಿ ಮತ್ತು ಸಂವೇದನಾಶೀಲವಾಗಿ ನಿರೂಪಿಸಲು ಲೇಖಕರು ಸಫಲರಾಗಿದ್ದಾರೆ. ಓದುತ್ತಾ ಹೋದಂತೆ ಇವೆಲ್ಲಾ ನಿಜ ಘಟನೆಗಳೇನೋ ಎಂಬಂತೆ ಭಾಸವಾಗುವ ರೀತಿಯಲ್ಲಿ ಬರೆವಣಿಗೆ ಸಾಗುತ್ತದೆ. ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಮತ್ತು ನಗರಗಳಲ್ಲಿ ವಾಸಿಸುವ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬಗಳ ಚಿತ್ರಣ ಎಲ್ಲಾ ಓದುಗರಿಗೂ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಲೇಖಕರು ವಿವರಿಸಿದ್ದಾರೆ. ಸರಳ ಭಾಷೆ ಓದುಗರನ್ನು ಪುಸ್ತಕಕ್ಕೆ ಮತ್ತಷ್ಟು ಆಪ್ತರನ್ನಾಗಿಸುತ್ತದೆ. ಈ ಪುಸ್ತಕವು ಯತಿರಾಜ್‍ ವೀರಾಂಬುಧಿ ಅವರ ಭಾಷಾ ಪ್ರಾವೀಣ್ಯತೆಗೆ ಮತ್ತು ವಿಷ ನಿರೂಪಣೆಯ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿ.

About the Author

ಯತಿರಾಜ್‍ ವೀರಾಂಬುಧಿ
(11 August 1957)

ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು-  ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...

READ MORE

Related Books