ರಾತ್ರಿ ಕಪ್ಪು ಕೊಡ ಕಪ್ಪು

Author : ಚಂದ್ರಕಾಂತ ಪೋಕಳೆ

₹ 200.00




Year of Publication: 2017
Published by: ಸೃಷ್ಟಿ ಪಬ್ಲಿಕೇಷನ್ಸ್
Address: ಬೆಂಗಳೂರು

Synopsys

‘ ರಾತ್ರಿ ಕಪ್ಪು ಕೊಡ ಕಪ್ಪು’ ಮೂಲದಲ್ಲಿ ಚಿಂತಾಮಣಿ ತ್ಯ್ರಂಬಕ ಖಾನೋಲ್ಕರ್ ಅವರ ಮರಾಠಿಯ ರೋಮ್ಯಾಂಟಿಕ್ ಕಾದಂಬರಿ. ಲೇಖಕ ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಆಪುರುಷ ಕಣ್ಣೆತ್ತಿ ಸರಿಯಾಗಿ ನೋಡುವುದೂ ಇಲ್ಲವೆಂದರೆ? ಭರ್ಜರಿ ದೇಹ, ಅಗಲವಾದ ಎದೆ. ಆಳವಾದ ಕಂಗಳು, ಶಾಂತಿಯುತ ಮುಖ, ಮೈಯೆಲ್ಲ ಮುಸುಗುಡುವ ಗೌರವವರ್ಣ, ಇಂಥವನು ಹೀಗೇಕೆ ಅಂತ? ಮನೆಯಲ್ಲೂ ಅವರಿಬ್ಬರೆ? ಹಿಂಬದಿಯಿಂದ ಮೆಲ್ಲಗೆ ಬಂದು ಸ್ಪರ್ಶಿಸಬಾರದೆ? ಹಸಿರು ಸೀರೆಯ ಅಂಚು ಹಿಡಿದು ಎಳೆಯಬಾರದೆ? ತನ್ನ ಮುಸುಗುಡುವ ದೇಹವನ್ನು, ಮೂಲೆಯ ಕತ್ತಲೆಯಲ್ಲಿ ನಿಂತ ಕಳ್ಳರಂತೆ ಗೂಬೆಯಂತೆ ನೋಡುತ್ತಾನಲ್ಲ; ಬದಲು ನೇರವಾಗಿ ಹಿಂಬದಿಯಿಂದ ಬಂದು ತನ್ನ ಬಲಿಷ್ಠ ತೋಳಿನಿಂದೇಕೆ ಕಣ್ಣು ಮುಚ್ಚಬಾರದು? ನಾನಂತೂ ಯಾವ ವಿರೋಧವನ್ನೂ ಮಾಡಲಾರೆ! ಇದೆಲ್ಲವೂ ನಿನ್ನದೇ. ಒರತಿಯ ನೀರು ಸಹ ಇದಕ್ಕೆ ಯಾವ ಆಘಾತ ಮಾಡಲಿಲ್ಲ! ಅಂಬೆ ನಿನಗಾಗೇ ಈ ದೇಹವನ್ನು ಸಂರಕ್ಷಿಸಿದ್ದಾಳೆ. ಬಾ ಪುರುಷನೆ ಕಣ್ತುಂಬ ಒಮ್ಮೆಯಾದರೂ ನೋಡು! ಲಕ್ಷ್ಮಿ ಪ್ರತಿಕ್ಷಣ ಒಂದೇ ಧ್ಯಾನದಲ್ಲಿ ಮುಳುಗಿಸುತ್ತಿದ್ದಳು. ಒಂದೇ ವಿಷಯವನ್ನು ಸತತ ಯೋಚಿಸುತ್ತಿದ್ದಳು’ ಎಂದು ಉಲ್ಲೇಖಿಸಲಾಗಿದೆ. 

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books