ಲೇಡಿ ಚಾಟರ್ಲೀಸ್ ಲವರ್

Author : ರಘುನಾಥ ಟಿ.ಎಸ್.

Pages 456

₹ 450.00




Year of Publication: 2022
Published by: ಸೃಷ್ಟಿ ಪಬ್ಲಿಕೇಷನ್ಸ್
Address: ಬೆಂಗಳೂರು

Synopsys

ಲೇಡಿ ಚಾಟರ್ಲೀಸ್ ಲವರ್ ಇಂಗ್ಲಿಷ್ ಲೇಖಕ ಡಿ.ಎಚ್.ಲಾರೆನ್ಸ್‌ನ ಕಡೆಯ ಕಾದಂಬರಿ. ಉನ್ನತ ವರ್ಗದ ವಿವಾಹಿತೆಯೊಬ್ಬಳು ಕೆಳ ವರ್ಗದವನೊಡನೆ ಹೊಂದಿರುವ ಪ್ರೇಮಸಂಬಂಧದ ಕಥೆ. ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿನ ಭಿನ್ನತೆಯೇ ಈ ಕಾದಂಬರಿಯಲ್ಲಿನ ಕೇಂದ್ರವಸ್ತು. ಈ ಕಾದಂಬರಿಯನ್ನು ಲೇಖಕ, ಅನುವಾದಕ ಟಿ.ಎಸ್. ರಘುನಾಥ್ ಅವರು ಕನ್ನಡಕ್ಕೆ ತಂದಿದ್ದಾರೆ. ಹಲವಾರು ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತಂದಿರುವ ಹೆಗ್ಗಳಿಕೆ ರಘುನಾಥ್ ಅವರದ್ದು. ಆ ಸಾಲಿಗೆ ಇದು ಹೊಸ ಸೇರ್ಪಡೆ.

About the Author

ರಘುನಾಥ ಟಿ.ಎಸ್.
(09 February 1954)

ಲೇಖಕ, ಅನುವಾದಕ ಟಿ.ಎಸ್. ರಘುನಾಥ್ ಅವರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲೂಕಿನ ತುರುವನೂರಿನವರು. 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು, ನಗರದ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 1985ರಿಂದ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜು ಮಲ್ಲೇಶ್ವರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಂತರ ಸ್ನಾತಕೋತ್ತರ ಸ್ಥಾಪಕ ಸಂಯೋಜಕರಾಗಿ ಕಾರ್ಯನಿರ್ವಹಿಸಿ 2014ರಲ್ಲಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆ ಬಹು ಮುಖ್ಯವಾಗಿ ಕಥನ ಪರಂಪರೆ ಮತ್ತು  ಸಂಶೋಧನಾ ಅಧ್ಯಯನಗಳಲ್ಲಿ ಆಸಕ್ತಿ ಹೊಂದಿರುವ ಅವರು ಪಾಶ್ಚಾತ್ಯ ಸಾಹಿತ್ಯ ಅದರಲ್ಲೂ ರಷ್ಯನ್ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.  ನಿವೃತ್ತಿಯ ನಂತರ ...

READ MORE

Related Books