
’ಗಾಡ್ ಫಾದರ್’- ಅಮೆರಿಕನ್ ಶೈಲಿಯ ಒಂದು ವಿಶಿಷ್ಟ ಕಾದಂಬರಿಯಾಗಿದೆ. ಈ ಕಾದಂಬರಿಯ ಮೂಲ ಕರ್ತೃ ಅಮೆರಿಕದ ಶ್ರೇಷ್ಠ ಕಾದಂಬರಿಕಾರ ಮಾರಿಯೋ ಪೂಜೊ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಂ.ವಿ ನಾಗರಾಜರಾವ್.
ಈ ಕಾದಂಬರಿಯ ಪಾತ್ರಗಳ ನೋವು, ಹಂಬಲ, ಪ್ರೀತಿ ಓದುರಿಗೆ ಆಪ್ತವಾಗುವಂತದ್ದು. ನಯವಾದ ನಿರೂಪಣೆಯೊಂದಿಗೆ ಸಾಗುವ ಈ ಕಾದಂಬರಿ ಕೊಲೆ, ಹೊಡೆದಾಟ, ಸೆಕ್ಸ್ ಗುಂಪುಗಳ ಮದ್ಯೆ ನಡೆಯುವ ಭೀಕರ ಸೆಣಸಾಟ, ದ್ವೇಷ, ಅಸೂಯೆ, ವೈಷಮ್ಯ, ವರ್ಗ ಸಂಘರ್ಷ, ಅಪೂರ್ವ ಕಲ್ಪನೆ, ಅಸಾಧ್ಯವನ್ನು ಸಾಧಿಸಿ ತೋರಿಸುವ ಛಲ, ಕುತಂತ್ರ ಷಡ್ಯಂತ್ರಗಳಿಂದ ಕೂಡಿದ ರೋಚಕ ಸಾಹಸ, ಮೈನವಿರೇಳಿಸುವ ಘಟನೆಗಳು, ಕ್ಷಣ ಕ್ಷಣಕ್ಕೂ ಬದಲಾಗುವ ಸನ್ನಿವೇಶಗಳು, ತೀವ್ರಗತಿಯ ಕಥಾ ತಿರುವು, ಮಾನವನ ಲೋಪ ದೋಷಗಳು, ಬೂಟಾಟಿಕೆ , ಅಧಿಕಾರದ ಲಾಲಸೆ ಅದರ ಕುರಿತಾದ ವಿಡಂಬನೆಯ ಸುತ್ತ ಕಾದಂಬರಿಯು ಅನಾವರಣಗೊಳ್ಳುತ್ತದೆ
©2025 Book Brahma Private Limited.