ಚೆಮ್ಮೀನು

Author : ಎ. ಮೋಹನ ಕುಂಟಾರ್

Pages 272

₹ 300.00




Year of Publication: 2023
Published by: ಯಾಜಿ ಪ್ರಕಾಶನ
Address: ಭೂಮಿ, ಎಂ. ಪಿ. ಪ್ರಕಾಶ್‌ ನಗರ, ಹೊಸಪೇಟೆ- 583201
Phone: 9449922800

Synopsys

1956ರಲ್ಲಿ ಪ್ರಕಟವಾದ ತಗಳಿ ಶಿವಶಂಕರ ಪಿಳ್ಳೆ ಅವರ ಕಾದಂಬರಿ ʻಚೆಮ್ಮೀನ್‌ʼ ಕೃತಿಯ ಕನ್ನಡ ಅನುವಾದ ʻಚೆಮ್ಮೀನುʼ. ಲೇಖಕ ಮೋಹನ ಕುಂಟಾರ್‌ ಅವರು ಕನ್ನಡಕ್ಕೆ ಅನುವಾದಿಸಿದ್ಧಾರೆ. ಕೇರಳದ ತೀರಪ್ರದೇಶಗಳಲ್ಲಿದ್ದ ಪರಂಪರಾಗತವಾಗಿ ನಂಬಿಕೆಯಲ್ಲಿದ್ದ ಸ್ತ್ರೀ ಕನ್ಯತ್ವಕ್ಕೆ ಸಂಬಂಧಪಟ್ಟ ವಿಚಾರಗಳು ಕೃತಿಯ ಕಥಾವಸ್ತು. ಹಿಂದೂ ಮೀನುಗಾರನ ಮಗಳು ಕರುತ್ತಮ್ಮ ಮತ್ತು ಮುಸ್ಲೀಂ ಮೀನು ಸಗಟು ವ್ಯಾಪಾರಿ ಮಗ ಪರೀಕುಟ್ಟಿ ಅವರ ನಡುವಿನ ಪ್ರೇಮ ಕತೆಯನ್ನು ಲೇಖಕರು ಕಾವ್ಯಾತ್ಮಕವಾಗಿ ಸಾರಿದ್ದಾರೆ. ಈ ಜನಾಂಗದಲ್ಲಿ ವಿವಾಹಿತ ಮಹಿಳೆ ತನ್ನ ಪತಿ ಮೀನುಹಿಡಿಯಲು ಸಮುದ್ರಕ್ಕೆ ಹೋದ ಸಮಯದಲ್ಲಿ ವ್ಯಭಿಚಾರ ಮಾಡಿದರೆ ಸಮುದ್ರ ದೇವತೆ ಪತಿಯನ್ನು ಸೇವಿಸುವಳು ಎಂಬ ನಂಬಿಕೆಯಿತ್ತು. ಆ ಚಿಂತನೆಗಳು ತಗಳಿ ಅವರು ಕಾದಂಬರಿಯುದ್ದಕ್ಕೂ ಆವರಿಸಿಕೊಂಡಿವೆ. ಮೂಲ ಕೃತಿಯು 1957ರ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿಯನ್ನು ಪಡೆದುಕೊಳ್ಳುವ ಮೂಲಕ ರಾಷ್ಟ್ರೀಯ ಪ್ರಶಸ್ತಿ ಪಡೆದ ಕೇರಳದ ಮೊದಲ ಕಾದಂಬರಿ ಎಂಬ ಕೀರ್ತಿಯೂ ಇದಕ್ಕಿದೆ. ಭಾರತೀಯ ಹಾಗೂ ವಿದೇಶೀ ಸೇರಿ ಸುಮಾರು 30 ಭಾಷೆಗಳಿಗೆ ಅನುವಾದಗೊಂಡಿದೆ. ಇನ್ನು ಈ ಕಾದಂಬರಿಯಾಧಾರಿತ ಚಲನಚಿತ್ರವೂ ಬಂದಿದ್ದು, ದಾಖಲೆಯನ್ನೇ ಬರೆದಿತ್ತು.

About the Author

ಎ. ಮೋಹನ ಕುಂಟಾರ್
(25 May 1963)

ಡಾ. ಎ. ಮೋಹನ್ ಕುಂಟಾರ್ ಅವರು 25-05-1963ರಂದು ಜನಿಸಿದರು. ಬಿ.ಎ, ಎಂ.ಎ, ಎಂ.,ಫಿಲ್ ಪದವೀಧರರು. ಮಲೆಯಾಳಂ ಭಾಷೆಯಲ್ಲಿ ಸರ್ಟಿಫಿಕೆಟ್, ತಮಿಳು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ತೆಲುಗು ಭಾಷೆಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಭಾಷಾಂತರ, ಸಾಹಿತ್ಯ, ಸಂಸ್ಕೃತಿ, ಮತ್ತು ಯಕ್ಷಗಾನ  ಪ್ರಮುಖ ಆಸಕ್ತಿ ಕ್ಷೇತ್ರಗಳು. ಕೇರಳ ಕಥನ, ಸಮುದಾಯಗಳ ಕನ್ನಡ ಪರಂಪರೆ, ಕನ್ನಡ ಮಲೆಯಾಳಂ ಭಾಷಾಂತರ ಪ್ರಕ್ರಿಯೆ ಇವರ ಪ್ರಮುಖ ಪ್ರಕಟಣೆಗಳು. ಕನ್ನಡ ಅನುವಾದ ಸಾಹಿತ್ಯ,”ಸಮುದಾಯಗಳಲ್ಲಿ ಲಿಂಗಸಂಬಂಧಿ ನೆಲೆಗಳು’ ಪ್ರಮುಖ ಸಂಶೋಧನಾ ಲೇಖನಗಳಾಗಿವೆ.  ...

READ MORE

Related Books