
ʼವ್ಯೂಹʼ ಕಾದಂಬರಿಯು ಗೇಬ್ರಿಯಲ್ ಗಾರ್ಸಿಯಾ ಮಾಕ್ವೇಜ್ ಅವರು ಇಂಗ್ಲಿಷ್ ಕಾದಂಬರಿಯ ಕನ್ನಡಾನುವಾದ. ಸಾಹಿತಿ ಡಾ. ಪಿ. ವಿ ನಾರಾಯಣ್ ಅವರು ಅನುವಾದಕರು. ಹಿಂದಿನ ಮಹಾ ವ್ಯಕ್ತಿಗಳ ಅವಾಸ್ತವಿಕ ಆದರ್ಶದಂತೆಯೂ, ಕಲ್ಪನಾಲೋಕದ ಕನಸುಗಳಂತೆಯೂ ಕಾಣುವ ಅನೇಕ ನಿರೀಕ್ಷೆಗಳು, ಆಶೋತ್ತರಗಳು ವರ್ತಮಾನದಲ್ಲಿ ಪಡೆದುಕೊಂಡಿರುವ ರೂಪಾಂತರಗಳನ್ನು ಕತೆಯ ರೂಪದಲ್ಲಿ ವಿವರಿಸಲಾಗಿದೆ. ಹಲವಾರು ತ್ಯಾಗ, ಬಲಿದಾನ, ಸಾವು, ನೋವುಗಳ ಹೋರಾಟದಾಚೆ ದೇಶವೊಂದು ಸ್ವಾತಂತ್ರ್ಯ ಪಡೆದುಕೊಳ್ಳಲು ಹೆಣಗಾಡುತ್ತದೆ. ಆದರೆ, ಇತಿಹಾಸ ಆ ಹೋರಾಟವನ್ನೂ, ಯಶಸ್ಸನ್ನೂ, ಕಾಲಾನಂತರ ಆ ಯಶಸ್ಸಿನ ಭವಿತವ್ಯವನ್ನೂ ತಣ್ಣಗೆ ದಾಖಲಿಸುವ ಈ ಕಾದಂಬರಿಯು ವಾಸ್ತವಿಕತೆಯನ್ನು ವಿವರಿಸುತ್ತಾ ಸಾಗುತ್ತದೆ. ಒಟ್ಟಿನಲ್ಲಿ ಈ ಕಾದಂಬರಿಯು ಸ್ವಾತಂತ್ರ್ಯ ಹೋರಾಟದ ಸುತ್ತ ಸುತ್ತುತ್ತದೆ.
©2025 Book Brahma Private Limited.