ಮನುಷ್ಯನಿಗೆ ಒಂದು ಮುನ್ನುಡಿ

Author : ಡಾ. ಅಶೋಕ್ ಕುಮಾರ್

Pages 400

₹ 300.00




Year of Publication: 2019
Published by: ಸಾಹಿತ್ಯ ಅಕಾಡೆಮಿ
Address: ಸಾಹಿತ್ಯ ಅಕಾಡೆಮಿ, ರಿಜನಲ್  ಆಫೀಸ್, ಅಂಬೇಡ್ಕರ್‌ ವೀದಿ, ಬೆಂಗಳೂರು- 560001
Phone: 22245152

Synopsys

ಡಾ.ಅಶೋಕ್ ಕುಮಾರ್ ಅನುವಾದಿಸಿರುವ ಮಲಯಾಳಂ ಕಾದಂಬರಿ “ಮನುಷ್ಯನಿಗೆ ಒಂದು ಮುನ್ನುಡಿ. ಮೂಲ ಲೇಖಕರು ಸುಭಾಷ್ ಚಂದ್ರನ್. ಮರಣಾನಂತರ ಕಾರ್ಯಗಳು ಮುಗಿದು, ಬಂಧುಗಳು ಮಕ್ಕಳೆಲ್ಲ ತೆರಳಿ ಆ ಫ್ಲಾಟ್ ನಲ್ಲಿ ವಿಧವೆಯಾಗಿ ಒಬ್ಬೊಂಟಿಯಾದ ಮೊದಲ ದಿವಸ, ತನಗೊಬ್ಬಳಿಗೇ ಅಮೂಲ್ಯವೆಂದೆನಿಸಿದ್ದ, ತನ್ನ ಗಂಡ ಕಾಲು ಶತಮಾನದ ಹಿಂದೆ ನೋವುದುಂಬಿದ ತಿರಸ್ಕಾರದಿಂದ ತ್ಯಜಿಸಿದ್ದ ಒಂದು ಹಿಂಡು ಅಕ್ಷರಗಳನ್ನು ಅವಳು ಹುಡುಕಿ ತೆಗೆದಳು. ಒಮ್ಮೆ ಚರಂಡಿ ನೀರಿನಲ್ಲಿ ಒದ್ದೆಯಾದ ಪುಸ್ತಕದ ಕಟ್ಟುಗಳ ಮಧ್ಯದಿಂದ ಅವಳು ಕಾಪಾಡಿ ತೆಗೆದು ಒಣಗಿಸಿ ಜತನವಾಗಿರಿಸಿದ್ದ ಕೆಲವು ಕಾಗದಗಳು ಮತ್ತು ಯೌವನದಲ್ಲಿ ಆತ ಬರೆಯಬೇಕೆಂದು ತೀವ್ರವಾಗಿ ಹಂಬಲಿಸಿದ್ದ ಒಂದು ಪುಸ್ತಕದ ಸಂಕ್ಷೇಪ ರೂಪದ ಟಿಪ್ಪಣಿಗಳೇ ಈ ಕೃತಿ.

About the Author

ಡಾ. ಅಶೋಕ್ ಕುಮಾರ್

ವೃತ್ತಿಯಿಂದ ವೈದ್ಯರಾಗಿರುವ ಡಾ. ಅಶೋಕ್ ಕುಮಾರ್‌ ಅವರು ಮಲಯಾಳಂ ಹಾಗೂ ತಮಿಳು ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿ ಆಗಿರುವ ಡಾ. ಅಶೋಕ್‌ ಕುಮಾರ್‌ ಅವರು ಶಸ್ತ್ರವೈದ್ಯರು. ಮಲಯಾಳಂ ಕವಯತ್ರಿ ಕಮಲಾದಾಸ್‌ ಅವರ ಕವಿತೆಗಳನ್ನು ಅವರು ಕನ್ನಡೀಕರಿಸಿದ್ದಾರೆ. ...

READ MORE

Related Books