
ಈ ಸಮಾಜ ಎದುರಿಸುತ್ತಿರುವ ಪಿಡುಗುಗಳಲ್ಲಿ ಮುಖ್ಯವಾದದ್ದು ಮೂಢನಂಬಿಕೆ. ನಮ್ಮ ಭಾರತದಲ್ಲಂತೂ ಇಂತಹ ಮೂಢ ನಂಬಿಕೆಗಳಿಗೆ ಲೆಕ್ಕವೇಇಲ. ಆದರೆ ಇಂತಹ ಕೆಟ್ಟನಂಬಿಕೆಗಳು ಹೆಚ್ಚಾಗಿ ಹೇಣ್ಣನ್ನೇ ಬಲಿಪಡೆಯುವಂತಹದ್ದು, ಇಂತಹದೇ ಸಮಾಜದ ಮೂಢನಂಬಿಕೆಗಳಿಗೆ ಉದಾಹರಣೆ ಈ ಕಾದಂಬರಿ.ಇಂಥಾ ಸಂಪ್ರದಾಯಗಳ ದಾಳಿಗೆ ಬಲಿಯಾದ ಉರ್ಮೀಳಳ ಬಾಳನು ನಿಶೆಯಿಂದ ಉಷೆಗೆ ಕೊಂಡೊಯ್ಯದ ಗೋಪಿ.ಮಕ್ಕಳಾಗದೇ ಇರುವುದು ಬರೀ ಹೆಣ್ಣಿನ ತಪ್ಪೇ?! ಎನ್ನುವ ಅಭಿಪ್ರಾಯ ಹೊಂದಿರುವ ಅತ್ತೆ ಮಂಗಳಮ್ಮ, ಹೆಂಡತಿಗೆ ದೋಹ ಬಗೆದ ಪತಿ ಶಂಕರ,ಇವರಗಳ ಮಧೈ ಪ್ರೀತಿಯ ತೋರುವ ನಾದಿನಿ ಸರಿತ ಸಿಕ್ಕಿದ್ದು ಉರ್ಮೀಳ ಪಾಲಿಗೆ ಚೇತೋಹಾರಿ.ಇಂತಹ ಮೌಢ್ಯಗಳ, ಅದನ್ನು ನಂಬುವ ಜನರ ಕಪಿಮುಷ್ಠಿಯಲ್ಲಿ ಬೆಂದ ಹೆಣ್ಣಿನ ಕಥನಕವೇ ಈ ಕಾದಂಬರಿ.
©2025 Book Brahma Private Limited.