ಬಿ.ಶ್ಯಾಮಸುಂದರ್

Author : ಎಚ್.ಟಿ. ಪೋತೆ

Pages 144

₹ 140.00




Year of Publication: 2021
Published by: ಕುಟುಂಬ ಪ್ರಕಾಶನ
Address: ಅಭಯ್ ಪೂರ್ಣವರ್ಷ ಪ್ಲಾಟ್ ನಂ.140, ಪೂಜಾ ಕಾಲೋನಿ, ವಿಶ್ವವಿದ್ಯಾಲಯ ಅಂಚೆ, ಕುಸನೂರ ರಸ್ತೆ, ಕಲಬುರಗಿ
Phone: 9449163751

Synopsys

‘ಬಿ.ಶ್ಯಾಮಸುಂದರ್’ ಜೀವನ ಕಥನವನ್ನು ಲೇಖಕ ಪ್ರೊ. ಎಚ್.ಟಿ. ಪೋತೆ ಅವರು ರಚಿಸಿದ್ದಾರೆ. ಬಿ. ಶ್ಯಾಮಸುಂದರ್ ಅಂಬೇಡ್ಕರೊತ್ತರದ ಒಬ್ಬ ವಿಶಿಷ್ಟ ನಾಯಕ. ಪೆರಿಯಾರ್ ಅವರೊಂದಿಗೆ ಸ್ನೇಹ ಹೊಂದಿದ್ದರು ಅಂಬೇಡ್ಕರ್ ಅವರು ನಡೆಸಿದ ಹೋರಾಟದ ಹಾದಿಯನ್ನು ತುಳಿಯುತ್ತಲೇ ದಲಿತ ಜನಸಂಘಟನೆ ಮಾಡಿದರು. ದಲಿತರನ್ನು ನೀವು ಮೂಲಭಾರತೀಯರು ಎಂದು ಹೇಳಿ ಅವರನ್ನು ಬಡದೆಬ್ಬಿಸಿದರು. ಭಾರತ ಸರಕಾರದ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಜಿಯವರು, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿ.ಎನ್. ಧರ್ಮಸಿಂಗ್ ಅವರು ಬಿ. ಶ್ಯಾಮಸುಂದರ್ ಅವರ ವಿಚಾರಗಳಿಗೆ ಪ್ರಭಾವಿತರಾಗಿದ್ದರು. ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ದಲಿತರು ಜೈಭೀಮ ಎಂದು ಹೇಳುವ ಮೂಲಕ ಪರಸ್ಪರ ಗೌರವಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂದರೆ, ಅದಕ್ಕೆ ಬಿ. ಶ್ಯಾಮಸುಂದರ್ ಅವರೇ ಕಾರಣಕರ್ತರು ಎನ್ನುತ್ತಾರೆ ಲೇಖಕ ಪ್ರೊ. ಎಚ್.ಟಿ ಪೋತೆ. ಈ ಕೃತಿಯಲ್ಲಿ ಬಿ. ಶ್ಯಾಮಸುಂದರ್: ಜೀವನ ಸಾಧನೆ, ಅವೈದಿಕ ಚಳವಳಿ: ಬಿ.ಶ್ಯಾಮಸುಂದರ್, ದಲಿತ ಚಳವಳಿಯ ಪಿತಾಮಹ ಬಿ. ಶ್ಯಾಮಸುಂದರ್ ಎಂಬ ಹೆಸರಿನಲ್ಲಿ ಶ್ಯಾಮಸುಂದರ್ ಅವರ ಬದುಕಿನ ಹಲವು ಮಜಲುಗಳನ್ನು ದಾಖಲಿಸಿದ್ದಾರೆ. ಜೊತೆಗೆ ಮೂಲ ಭಾರತೀಯರು ಎಂಬ ಮುಖ್ಯ ಅಂಶದ ಅಡಿಯಲ್ಲಿ ನಮ್ಮ ಭೂತ ಮತ್ತು ವರ್ತಮಾನ, ಭೀಮಸೇನೆ ಏಕೆ ಮತ್ತು ಹೇಗೆ, ಮೂಲ ಭಾರತೀಯರಿಗೆ ಪ್ರತ್ಯೇಕ ರಾಜಕೀಯ ವ್ಯವಸ್ಥೆ, ಹದಿನೈದು ಕೋಟಿ ದಮನಿತರ ಮೂರು ತುರ್ತುಗಳು, ಆಂಧ್ರಪ್ರದೇಶ ಸರ್ಕಾರ ಆದೇಶ ಹಾಗೂ ಬಿ. ಶ್ಯಾಮಸುಂದರ್ ಬದುಕಿನ ಮಹತ್ವದ ಘಟನಾವಳಿಗಳು ಎಂಬ ಶೀರ್ಷಿಕೆಯಡಿಯಲ್ಲಿ ಮಹತ್ವದ ಮಾಹಿತಿಗಳನ್ನು ದಾಖಲಿಸಿದ್ದಾರೆ.

About the Author

ಎಚ್.ಟಿ. ಪೋತೆ

ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...

READ MORE

Related Books