ಲೋಹಿಯಾ- ವ್ಯಕ್ತಿ ಮತ್ತು ವಿಚಾರ

Author : ಬಾಪು ಹೆದ್ದೂರಶೆಟ್ಟಿ

Pages 296

₹ 200.00




Year of Publication: 2014
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ ಹೋಟೆಲ್, ಗದಗ- 582101
Phone: 9480286844

Synopsys

ಭಾರತದ ಸಮಾಜವಾದಿ ಆಂದೋಲನದಲ್ಲಿ ರಾಮಮನೋಹರ ಲೋಹಿಯಾ ಅವರು  ಪ್ರಮುಖ ಪಾತ್ರವನ್ನು ವಹಿಸಿದ್ದರು.   ಅವರ ಜನ್ಮ ಶತಮಾನೋತ್ಸವ ಮುಗಿಯುತ್ತಿರುವ ಸಂದರ್ಭದಲ್ಲಿ ಅವರ ವ್ಯಕ್ತಿತ್ವದ ಹಾಗೂ ವಿಚಾರಗಳ ಇನ್ನೊಂದು ಮಗ್ಗುಲನ್ನು ನೋಡುವ ಪ್ರಯತ್ನವಾಗಿ ’ ಲೋಹಿಯಾ ವ್ಯಕ್ತಿ ಮತ್ತು ವಿಚಾರ’ ಒಂದು ವಿಭಿನ್ನ ವಿಮರ್ಶೆ ಕೃತಿಯನ್ನು ಹೊರತರಲಾಗಿದೆ. 

ಲೋಹಿಯಾ ಅವರನ್ನು ಕೇಂದ್ರವಾಗಿಟ್ಟುಕೊಂಡು ಬಾಪು ಹೆದ್ದೂರಶೆಟ್ಟಿಯವರು ತಮ್ಮ ಈ ಕೃತಿ ರಚನೆಯ ಪ್ರಯತ್ನದಲ್ಲಿ ಭಾರತದ ಸಮಾಜವಾದಿ ಆಂದೋಲನದ ಇತಿಹಾಸದ ಪುಟಗಳನ್ನೂ, ಭಾರತದ ಹಾಗೂ ವಿಶ್ವದ ಸಮಾಜವಾದಿ ಚಿಂತನೆಯ ಹಲವಾರು ಪದರಗಳನ್ನೂ ತಿರುವಿ ಹಾಕಿದ್ದಾರೆ. ಪುಸ್ತಕ ಓದಿದರೆ ಲೋಹಿಯಾ ಅವರ ವ್ಯಕ್ತಿತ್ವದ ಹಾಗೂ ವಿಚಾರಗಳ ಇನ್ನೊಂದು ಮಗ್ಗುಲದ ಪರಿಚಯವಾಗುವುದರ ಜೊತೆಗೆ ಓದುಗರಿಗೆ ಭಾರತದ ಸಮಾಜವಾದಿ ಆಂದೋಲನದ ಇತಿಹಾಸದ ಹಲವಾರು ಘಟನೆಗಳ ಬಗ್ಗೆ, ಸಮಾನತೆ, ಸಮಾನ ಅವಕಾಶ, ಕಲ್ಯಾಣ ರಾಜ್ಯ, ಮೊದಲಾದ ಸಮಾಜವಾದಿ ಪರಿಕಲ್ಪನೆಗಳ ಬಗೆಗೆ ಭಾರತದ ಹಾಗೂ ವಿಶ್ವದ ಚಿಂತನಾಕ್ರಮದ ಪರಿಚಯವೂ ಆಗುತ್ತದೆ. 

About the Author

ಬಾಪು ಹೆದ್ದೂರಶೆಟ್ಟಿ

ವೃತ್ತಿಯಿಂದ ವಕೀಲರಾಗಿರುವ ಬಾಪು ಹೆದ್ದೂರಶೆಟ್ಟಿಯವರು ಪ್ರವೃತ್ತಿಯಿಂದ ಸಮಾಜವಾದಿ ರಾಜಕಾರಣಿ. ಅವರು ತಮ್ಮ ಕಾಲೇಜಿನ ದಿನಗಳಿಂದಲೇ ಸಮಾಜವಾದಿ - ಆಂದೋಲನದ ಜೊತೆಗೆ ಗುರುತಿಸಿಕೊಂಡವರು. ಪ್ರಜಾ ಸಮಾಜವಾದಿ ಪಕ್ಷದ ಹಾಗೂ ನಂತರ ಸಮಾಜವಾದಿ ಪಕ್ಷದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಗಳಾಗಿ ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ. ಕರ್ನಾಟಕ ಪ್ರವಾಸೋದ್ಯಮ ನಿಗಮ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಗಳ ಅಧ್ಯಕ್ಷರಾಗಿ, ನಂತರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ಸರಕಾರಿ ಅಧಿಕಾರವನ್ನೂ ಕಂಡಿದ್ದಾರೆ. ಭೂಗ್ರಹಣ ಚಳುವಳಿಯಲ್ಲಿ ಭಾಗವಹಿಸಿದ ಅವರು, ತುರ್ತು ಪರಿಸ್ಥಿತಿಯಲ್ಲಿ ಸಕ್ರಿಯರಾಗಿದ್ದು ಡೈನಮೈಟ ಸಿಡಿಸಿದ್ದರೆಂದೂ ಅವರ ನಿಕಟವರ್ತಿಗಳು ಹೇಳುತ್ತಾರೆ. ಅವರು ...

READ MORE

Related Books