ಅಹಿಲ್ಯಾಬಾಯಿ ಹೋಳ್ಕಕರ

Author : ಚಂದ್ರಕಾಂತ ಬಿಜ್ಜರಗಿ

Pages 424

₹ 290.00




Year of Publication: 2007
Published by: ಶೈಲಚಂದ್ರ ಪ್ರಕಾಶನ
Address: ದರ್ಗಾ, ಸೆಂಟ್ರಲ್‌ ಜೈಲ್ ಹತ್ತಿರ, ವಿಜಯಪುರ 586103
Phone: 9448336151

Synopsys

ಅಹಿಲ್ಯಾಬಾಯಿಯ ಹೋಳ್ಕರ್‌ ಅವರನ್ನು ಪರಿಚಯಿಸುವ ಕೃತಿಯಿದು. ಅತ್ಯಂತ ವಿಸ್ತೃತ ರೀತಿಯಲ್ಲಿ ರಚಿತವಾಗದ ಸಂಶೋಧನಾ ಕೃತಿಯಿ. 31-5-1725ರಲ್ಲಿ ಉಣ್ಣೆ ನೇಕಾರ ಕುಲದಲ್ಲಿ ಜನಿಸಿದ ಅಹಿಲ್ಯಾಬಾಯಿಯ ಅವರು ತವರಿನ ಪೂರ್ವಜರು ಕರ್ನಾಟಕದ ಭಾಗವಾಗಿದ್ದ ಇಂದಿನ ಕೊಲ್ಲಾಪುರಕ್ಕೆ ಸನಿಹದಲ್ಲಿರುವ ಕನ್ಹೇರಿಯವರು. ಕ್ರಿ.ಶ. 1769 ರಿಂದ 1795ರ ವರೆಗೆ ಇಂದೂರ ರಾಜ್ಯವನ್ನು ಆಳಿದ ವೀರ ಮಾತೆ ಅಹಲ್ಯಾಬಾಯಿ ಅವರು ಭಾರತದಲ್ಲಿ ಮೊಟ್ಟ ಮೊದಲು ಮಹಿಳಾ ಸೈನ್ಯ ಕಟ್ಟಿದವರು. ಭಾರತದದಲ್ಲಿರುವ 12 ಜ್ಯೋತಿರ್ಲಿಂಗ ಮಂದಿರಗಳನ್ನು ಜೀರ್ಣೋದ್ಧಾರ ಮಾಡಿಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ 3115 ಹಿಂದೂ ಮಂದಿರಗಳನ್ನು ಕಟ್ಟಿಸಿದವರು.  ಭಾರತವನ್ನು ಹಿಂದೂ ಧಾರ್ಮಿಕ ಕ್ಷೇತ್ರವನ್ನಾಗಿ ಪರಿವರ್ತಿಸಿದ ದಿಟ್ಟ ಮಹಿಳೆ. ಅವರನ್ನು ಕುರಿತ ಕೃತಿಯಿದು.

About the Author

ಚಂದ್ರಕಾಂತ ಬಿಜ್ಜರಗಿ
(27 September 1949)

ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು.  ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...

READ MORE

Related Books