ಕಡಕೋಳ ಮಡಿವಾಳಪ್ಪ

Author : ನಾಗಭೂಷಣ ಬಗ್ಗನಡು

Pages 64

₹ 60.00




Year of Publication: 2015
Published by: ಶ್ರೀ ಬಸವ ಅಧ್ಯಯನ ಪೀಠ
Address: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, , ಮಾನಸ ಗಂಗೋತ್ರಿ,  ಮೈಸೂರು ವಿಶ್ವವಿದ್ಯಾಲಯ

Synopsys

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿಯ ಶ್ರೀಬಸವ ಅಧ್ಯಯನಪೀಠದ ‘ವಚನ ಚಿಂತನ’ ಮಾಲೆ’ಗಾಗಿ ನಾಗಭೂಷಣ ಬಗ್ಗನಡು ಅವರು ಬರೆದ ಪುಸ್ತಕ- ಕಡಕೋಳ ಮಡಿವಾಳಪ್ಪ. ತತ್ವಪದಕಾರ ಕಡಕೋಳ ಮಡಿವಾಳಪ್ಪನವರ  ಕಾಲ- ಜನನಕ್ಕೆ ಸಂಬಂಧಿಸಿದ ಕಥೆಗಳನ್ನು ‘ಹುಟ್ಟಿನ ಹುತ್ತ ಮತ್ತು ಕಾಲಮಾ” ಹಾಗೂ ಬಾಲ್ಯ ಬೆಳವಣಿಗೆ’ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ತತ್ವಪದಕಾರರಾಗಿ ಮಡಿವಾಳಪ್ಪನವರ ಪ್ರಾಮುಖ್ಯತೆ, ಧಾರ್ಮಿಕ ಮತ್ತು ವರ್ತಮಾನದ ಮುಖಾಮುಖಿಯಾಗಿ ಮಡಿವಾಳಪ್ಪನವರ ವಚನಗಳು ಮತ್ತು ತತ್ವಪದಗಳ ವಿಮರ್ಶೆಯ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. 

 

About the Author

ನಾಗಭೂಷಣ ಬಗ್ಗನಡು
(01 June 1976)

ಸಂಶೋಧಕ, ಲೇಖಕ ನಾಗಭೂಷಣ ಬಗ್ಗನಡು ಅವರು ಮೂಲತಃ ತುಮಕೂರಿನ ದೊಡ್ಡೇನಹಳ್ಳಿ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ‘ಬದಲಾಗುತ್ತಿರುವ ಆಧುನಿಕ ಪರಿಸರದಲ್ಲಿ ಜಾನಪದ’ ಪ್ರಬಂಧ ಮಂಡಿಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವೀಧರರು. ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.   ಬಂಡಾಯ ಚಳವಳಿ, ತಳ ಸಮುದಾಯಗಳ ಹಕ್ಕುಗಳ ಹೋರಾಟ, ಜನಪರ ಚಳವಳಿಗಳಲ್ಲಿ ಸಕ್ರಿಯರು. ಇವರ ಮೊದಲ ಕೃತಿ ‘ಆಧುನಿಕ ಜಾನಪದ’. ಕಡಕೋಳ ಮಡಿವಾಳಪ್ಪ, ಸುಡುಗಾಡು ಸಿದ್ಧರು, ಕಾಲುದಾರಿ, ಬೆಂಕಿ ಬೆಳಕು, ಲಂಕೇಶ್ ಒಂದು ನೆನಪು ಹಾಗೂ ಸಂಶೋಧನಾ ಕೃತಿಗಳು: ವೃತ್ತಿ ರಂಗಭೂಮಿ ನಾಟಕಗಳಲ್ಲಿ ಅಸ್ಪೃಷ್ಯತೆ ಮತ್ತು ದಲಿತತ್ವದ ನೆಲೆಗಳು, ದಲಿತ ಪುರಾಣಗಳು.  ...

READ MORE

Related Books