ಬಸವಪ್ರಭು ಪಾಟೀಲ

Author : ಗುರುಪಾದ ಮರಿಗುದ್ದಿ

Pages 96

₹ 50.00




Year of Publication: 2018
Published by: ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ,
Address: ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಎಡೆಯೂರು-ಡಂಬಳ-ಗದಗ
Phone: 9448144419

Synopsys

ಅಸ್ಪೃಶ್ಯತೆದೇವದಾಸಿ ಪದ್ಧತಿಜೀತಪದ್ಧತಿ ಮುಂತಾದ ಅನಿಷ್ಠಗಳು ನಮ್ಮ ಸಮಾಜಕ್ಕಂಟಿದ ಬಹುದೊಡ್ಡ ಕಲಂಕ. ಇವುಗಳಲ್ಲಿ ದೇವದಾಸಿ ಪದ್ಧತಿಯಂತೂ ಇನ್ನು ಕ್ರೂರಅಮಾನವೀಯ. ದೇಹ ಮನಸ್ಸುಗಳೆಲ್ಲ ನುಜ್ಜುನುರಿಯಾಗಿ ಕೊನೆಗಾಲದಲ್ಲಿ ಜೀವಂತ ಶವದಂತೆ ಬಾಳುವ ಅಭಾಗಿನಿಯರ ಬದುಕು ನಿಜಕ್ಕೂ ದುರ್ಭರ. ಈ ನೊಂದ ಜೀವಿಗಳಿಗಂಟಿದ ಶತಮಾನದ ಶಾಪದಿಂದ ಅವರನ್ನು ವಿಮೋಚನೆಗೊಳಿಸಿದವರು ಬಸವಪ್ರಭು ಪಾಟೀಲರು. ಮಲಾಬಾದ ಹಳ್ಳಿಯಲ್ಲಿ ದೇವದಾಸಿಯರ ಮಕ್ಕಳಿಗಾಗಿ ಪ್ರತ್ಯೇಕ ಶಾಲೆ ಸ್ಥಾಪಿಸುವುದರೊಂದಿಗೆ ದಿಟ್ಟಹೆಜ್ಜೆಯಿಟ್ಟ ಪಾಟೀಲರು ಅಥಣಿಯಲ್ಲಿ ಕನಸನ್ನು ನನಸಾಗಿಸಿದವರು ಪಾಟೀಲರು. ಪಾಟೀಲರ ಜೀವನ ಸಾಧನೆಯನ್ನು ಈ ಪುಸ್ತಕ ಕಟ್ಟಿಕೊಡುತ್ತದೆ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books