ಸಂಗೀತ ಸಾಮ್ರಾಟ್ ಟಿ.ಚೌಡಯ್ಯ

Author : ಎನ್. ಜಗದೀಶ್ ಕೊಪ್ಪ

Pages 172

₹ 130.00




Year of Publication: 2018
Published by: ವಿಕಸನ
Address: ವಿಜ್ಞಾತಂ ಭವನ, ಆದಿಚುಂಚನಗಿರಿ ವಿಶ್ವವಿದ್ಯಾನಿಲಯ(ACU), ಬಿ.ಜಿ. ನಗರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ- 571448

Synopsys

ಡಾ. ಎನ್. ಜಗದೀಶ್ ಕೊಪ್ಪ ಅವರು ರಚಿಸಿರುವ ಜೀವನ ಚರಿತ್ರೆ ‘ಸಂಗೀತ ಸಾಮ್ರಾಟ್ ಟಿ.ಚೌಡಯ್ಯ’. ಈ ಕೃತಿ ವಿಕನಸ ಪ್ರಕಾಶನದ ಒಕ್ಕಲಿಗ ಸಾಧಕರು ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಪುಸ್ತಕದ ಬೆನ್ನುಡಿಯಲ್ಲಿ ಡಿ.ವಿ. ಗುಂಡಪ್ಪ, ಡಾ.ಎಂ.ಎಲ್. ವಸಂತಕುಮಾರಿ, ಜಿ.ಎನ್. ಬಾಲಸುಬ್ರಮಣ್ಯಂ ಹಾಗೂ ಮುಸುರಿ ಸುಬ್ರಮಣ್ಯಂ ಅಯ್ಯರ್ ಅವರು ಟಿ. ಚೌಡಯ್ಯನವರ ಕುರಿತು ಬರೆದ ಬರೆಹಗಳನ್ನು ನೀಡಲಾಗಿದೆ. ಮೈಸೂರು ಟಿ. ಚೌಡಯ್ಯನವರು ಸ್ವಂತ ಪ್ರತಿಭೆಯಿಂದ ಸಂಗೀತ ಕ್ಷೇತ್ರದಲ್ಲಿ ಮುಂಚೂಣಿಗೆ ಬಂದವರು. ಕರ್ನಾಟಕ ಸಂಗೀತ ಮಾತ್ರವಲ್ಲದೆ. ಉತ್ತರ ಭಾರತದ ಎಲ್ಲಾ ಪ್ರಸಿದ್ಧ ಕಲಾವಿದರ ಮನಸ್ಸಿನಲ್ಲಿ ಅವರು ಚಿರಸ್ಮರಣೀಯರಾಗಿ ಉಳಿದುಕೊಂಡಿದ್ದಾರೆ ಎಂದಿದ್ದಾರೆ ಸುಪ್ರಸಿದ್ಧ ಗಾಯಕರಾದ ಜಿ.ಎನ್. ಬಾಲಸುಬ್ರಮಣ್ಯಂ. ಜೊತೆಗೆ ಅವರೊಳಗಿದ್ದ ಸೃಜನಶೀಲತೆಯ ಗುಣದಿಂದಾಗಿ ಅವರ ಸಂಗೀತ ಕಲೆಯು ಸದಾ ನೆನಪಿನಲ್ಲಿ ಉಳಿಯುತ್ತದೆ. ಟಿ. ಚೌಡಯ್ಯನವರು ಒಬ್ಬ ಶ್ರೇಷ್ಠ ಕಲಾವಿದ ಮಾತ್ರವಲ್ಲದೆ, ಮಾನವೀಯ ಗುಣವುಳ್ಳ ಹಾಗೂ ಎಲ್ಲರಿಗೂ ಸಹಾಯದ ಹಸ್ತ ಚಾಚುತ್ತಾ ಗೆಳೆಯರ ಪಾಲಿಗೆ ಆಪತ್ಪಾಂಧವನಂತೆ ಬದುಕಿದವರು ಎಂದಿದ್ದಾರೆ ಡಿ.ವಿ. ಗುಂಡಪ್ಪ.

About the Author

ಎನ್. ಜಗದೀಶ್ ಕೊಪ್ಪ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...

READ MORE

Related Books