ವೈದ್ಯಾಧಿಕಾರಿಯ ಬದುಕು ಬವಣೆ

Author : ಎಚ್.ಡಿ. ಚಂದ್ರಪ್ಪಗೌಡ

Pages 372

₹ 150.00




Year of Publication: 2002
Published by: ಮಲೆನಾಡು ಸಾಹಿತ್ಯ ಪ್ರಕಾಶನ
Address: ಮಿಷನ್‌ ಕಾಂಪೌಂಡು, ಶಿವಮೊಗ್ಗ- 577201

Synopsys

‘ವೈದ್ಯಾಧಿಕಾರಿಯ ಬದುಕು ಬವಣೆ’ ಎಚ್‌.ಡಿ ಚಂದ್ರಪ್ಪ ಗೌಡ ಅವರ ವೈದ್ಯಕೀಯ ಕೃತಿಯಾಗಿದೆ. ವೈದ್ಯರು ಉತ್ತಮ ಹೆಸರು ಗಳಿಸುವುದು ಅವರು ತ್ಯಾಗ ಮಾಡಿದ ಸುಖ ಸಂತೋಷಗಳನ್ನು ಅವಲಂಬಿಸಿದೆ. ಈ ಆತ್ಮಚರಿತ್ರೆ ವೈದ್ಯರ ಬದುಕಿನಲ್ಲಿ ಬವಣೆ- ಆತಂಕಗಳಿಗೆ ಕೊರತೆ ಇಲ್ಲದ್ದನ್ನು ತಿಳಿಸುತ್ತದೆ.

About the Author

ಎಚ್.ಡಿ. ಚಂದ್ರಪ್ಪಗೌಡ
(29 June 1929)

ಡಾ. ಚಂದ್ರಪ್ಪಗೌಡ ಎಚ್.ಡಿ ಅವರು  29-6- 1929 ಹೊಳೆಗದ್ದೆಯಲ್ಲಿ ಜನಿಸಿದರು. ವೃತ್ತಿಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವ ಅವರು, ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದಾರೆ. ವೈಜ್ಞಾನಿಕ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಎಚ್.ಡಿ. ಚಂದ್ರಪ್ಪಗೌಡ ಅವರು ಆರೋಗ್ಯದ ಕುರಿತಾಗಿ, ಮತ್ತು ಸೃಜನಶೀಲವಾಗಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ಲೋಕದ ಕೌತುಕಗಳು, ಕುಸಿದುಬೀಳದಂತೆ ತಡೆಯುವುದು ಹೇಗೆ, ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಕುವೆಂಪು ವೈದ್ಯ ಸಾಹಿತ್ಯ ಪುರಸ್ಕಾರ, ದೇಜಗೌ ಪ್ರತಿಷ್ಠಾನದ ವಿಶ್ವಮಾನವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಚ್.ಡಿ.ಚಂದ್ರಪ್ಪಗೌಡ ಅವರ ಮುಖ್ಯ ಕೃತಿಗಳು : ಜೋಸೆಫ್ ಆಸ್ಟರ್, ವೈದ್ಯವಿಜ್ಞಾನ ಸಾಧಕರು, ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು ...

READ MORE

Reviews

ಹೊಸತು-2003-ಜನವರಿ

'ಸರ್ಜನರ ಸಂಗವದು ಹೆಚ್ಚೇನು ಕಡಿದಂತೆ' ಎಂಬುದಾಗಿ ಹಾಡಿಕೊಳ್ಳಬೇಕಾದ ಇಂದಿನ ವೈದ್ಯ-ವ್ಯಾಪಾರದ ದಿನಗಳಲ್ಲಿ ಖಂಡಿತವಾಗಿಯೂ ಬಡರೋಗಿಗಳ ಪಾಲಿಗೆ ಸಜ್ಜನರಾಗಿಯೇ ಉಳಿದು ಹೆಚ್ಚೇನಿನ ಸವಿಯನ್ನೇ ನೀಡಿರುವ ಅಪರೂಪದ ಶಸ್ತ್ರವೈದ್ಯ ಡಾ|| ಎಚ್. ಡಿ. ಚಂದ್ರಪ್ಪಗೌಡರು ಸೌಜನ್ಯದ ಸಾಕಾರ ಮೂರ್ತಿ, ವೈದ್ಯರು ಉತ್ತಮ ಹೆಸರು ಗಳಿಸುವುದು ಅವರು ತ್ಯಾಗ ಮಾಡಿದ ಸುಖ ಸಂತೋಷಗಳನ್ನು ಅವಲಂಬಿಸಿದೆ. ಈ ಆತ್ಮಚರಿತ್ರೆ ವೈದ್ಯರ ಬದುಕಿನಲ್ಲಿ ಬವಣೆ-ಆತಂಕಗಳಿಗೆ ಕೊರತೆ ಇಲ್ಲದ್ದನ್ನು ತಿಳಿಸುತ್ತದೆ.

Related Books