ದ್ವಿಲೋಹಶಿಲ್ಪ ರಚನಾ ಆದ್ಯಪ್ರವರ್ತಕ ಎನ್.ಪಿ. ಶ್ರೀನಿವಾಸಾಚಾರ್ಯ

Author : ಕವಿತಾ ಡಿ.ಕೆ.

Pages 96

₹ 90.00




Year of Publication: 2017
Published by: ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ
Address: ಕನ್ನಡ ಭವನ, ಮೇಲ್ಮನೆ ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು-2

Synopsys

ಹೆಸರಾಂತ ಶಿಲ್ಪಿ ಎನ್.ಪಿ. ಶ್ರೀನಿವಾಸಾಚಾರ್ಯ ಅವರ ಜೀವನ ಮತ್ತು ಸಾಧನೆ, ಕಲಾಕೃತಿಗಳ ಮಹತ್ವ ಕುರಿತ ಪುಸ್ತಕವಿದು. ಶ್ರೀನಿವಾಸಾಚಾರ್ಯ ಅವರ ಶತಮಾನೋತ್ಸವ ಸಂದರ್ಭದಲ್ಲಿ ಶಿಲ್ಪಕಲಾ ಅಕಾಡೆಮಿಯು ಈ ಪುಸ್ತಕವನ್ನು ಪ್ರಕಟಿಸಿದೆ. ಕಲಾವಿದರ ಮೊಮ್ಮಗಳಾದ ಡಿ.ಕೆ. ಕವಿತಾ ಅವರು ಈ ಪುಸ್ತಕವನ್ನು ಸಂಪಾದಿಸಿದ್ದಾರೆ. ಶ್ರೀನಿವಾಸಾಚಾರ್ಯ ಅವರ ಪತ್ನಿ ಶಾರದಮ್ಮ, ಶಾರದಮ್ಮ ಅವರ ಸಹೋದರ ನಾ.ಭಾ. ಚಂದ್ರಶೇಖರಾಚಾರ್ಯ, ಚೂಡಾಮಣಿ ನಂದಗೋಪಾಲ್, ಶ್ರೀನಿವಾಸಾಚಾರ್ಯ ಅವರ ಪುತ್ರ ಎನ್.ಎಸ್. ಸುಜ್ಞಾನಮೂರ್ತಿ ಅವರು ಸೇರಿದಂತೆ ಕುಟುಂಬದ ಸದಸ್ಯರಿಂದ ಪಡೆದ ಮಾಹಿತಿಯನ್ನ ಸಂಕಲಿಸಿ ಜೀವನ ಚರಿತ್ರೆಯ ರೂಪದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಪುಸ್ತಕದಲ್ಲಿ ಒಟ್ಟು 13 ಅಧ್ಯಾಯಗಳಿವೆ. ಮೊದಲನೆಯದು ಶಿಲ್ಪಿಯ ಪರಿಚಯವಾದರೆ, ನಂತರದ ಅಧ್ಯಾಯಗಳಲ್ಲಿ ಯುವಶಿಲ್ಪಿ, ಮೈಸೂರಿನ ವರಶಿಲ್ಪಿ, ರಾಜಗುರುಗಳ ಶಿಷ್ಯತ್ವ, ಧರ್ಮಸ್ಥಳದಲ್ಲಿ, ಜೀವನದ ತಿರುವುಗಳು, ಗಮ್ಯದತ್ತ ನಡೆದ ವರಶಿಲ್ಪಿ, ನಿವೃತ್ತಿಯ ನಂತರ, ಮೈಸೂರು ದಸರಾ ಚಾಮುಂಡೇಶ್ವರಿ ಉತ್ಸವ ಮೂರ್ತಿ ಚಾಮುಂಡೇಶ್ವರಿ ರಚನೆ, ಒಂದೇ ಶಿಲ್ಪದಲ್ಲಿ ಎರಡು ಲೋಹ ಬಳಸುವ ಅಪರೂಪದ ಮತ್ತು ಅಪೂರ್ವ ದ್ವಿಲೋಹ ಶಿಲ್ಪ ನಿರ್ಮಾಣಕ್ಕೆ ನಾಂದಿ ಹಾಡಿದರು. ಅನುಬಂಧದಲ್ಲಿ ಶಿಲ್ಪಕಲಾ ಅಕಾಡೆಮಿಯು ಪ್ರಕಟಿಸಿದ್ದ ಎನ್.ಪಿ. ಶ್ರೀನಿವಾಸಾಚಾರ್ಯರ ಕುರಿತ ಪುಸ್ತಕದಲ್ಲಿ ಬಿ.ವಿ.ಕೆ. ಶಾಸ್ತ್ರಿ ಮತ್ತು ಮುಳಹಳ್ಳಿ ಸೂರಿ ಅವರ ಬರಹಗಳನ್ನು ಪ್ರಕಟಿಸಲಾಗಿದೆ. ಶ್ರೀನಿವಾಸಾಚಾರ್ಯರ ಮತ್ತು ಅವರ ಕಲಾಕೃತಿಗಳ ಚಿತ್ರ ನೀಡಲಾಗಿದೆ.

Related Books