ನಾಡಿಗೇರ ಕೃಷ್ಣರಾಯರು

Author : ಪ್ರತಿಭಾ ನಾಡಿಗೇರ

Pages 72

₹ 45.00




Year of Publication: 2013
Published by: ಉದಯಭಾನು ಕಲಾ ಸಂಘ (ನೋಂ.)
Address: ಉದಯಭಾನು ಉನ್ನತ ಅಧ್ಯಯನ ಕೇಂದ್ರ, ಗವಿಪುರ ಸಾಲುಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು-560019
Phone: (080-26609343 / 26601831)

Synopsys

ನಾಡಿಗೇರ ಕೃಷ್ಣರಾವ್ ಕನ್ನಡದ ಪ್ರಸಿದ್ದ ಬರಹಗಾರರು. ಕನ್ನಡ ನಾಡಿನ ಹೋರಾಟಗಾರರಲ್ಲಿ ಪ್ರಮುಖರು. ಸಂಯುಕ್ತ ಕರ್ನಾಟಕ, ತಾಯಿನಾಡು, ಕಥಾಂಜಲಿ, ಪ್ರಜಾಮತ, ದೇಶಬಂಧು ಮೊದಲಾದ ಪತ್ರಿಕೆಗಳಲ್ಲಿ  ಕೆಲಸ ಮಾಡಿದ್ದಾರೆ. ’ಗೇಡಿನಾರ’ ಎಂಬ ಕಾವ್ಯನಾಮದಲ್ಲಿ ಸಾಹಿತ್ಯ ರಚನೆ ಮಾಡಿದ ಇವರು ಕಥೆ, ಕಾದಂಬರಿ, ಹಾಸ್ಯ, ಪ್ರಬಂಧ, ನಾಟಕ ಹೀಗೆ 25 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ’ಅದಲು ಬದಲು, ಇಬ್ಬರು ಸುಂದರಿಯರು,, ಗುಲಾಮ, ಪ್ರಿಯಸಖಿ, ಪ್ರೇಮ ಮಂಟಪ, ಪ್ರೇಮವಂಚಿತ’ ಮೊದಲಾದ ಕಾದಂಬರಿಗಳನ್ನು ರಚಿಸಿದ್ದಾರೆ. ಹಾಸ್ಯ ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಟ್ಟು ನೂರಾರು ಲೇಖನಗಳನ್ನು ಬರೆದರು. ತಮ್ಮ ಬರಹಗಳ ಮೂಲಕ ಓದುಗರಲ್ಲಿ ಹಾಸ್ಯ ಬರಹಗಳ ಹೊನಲನ್ನು ಹರಿಸಿದರು. 

1954ರಲ್ಲಿ ಸಿ.ವಿ.ರಾಜು  ನಿರ್ಮಿಸಿದ ’ನಟಶೇಖರ’ ಚಿತ್ರಕ್ಕೆ 15 ಹಾಡುಗಳನ್ನು ರಚಿಸಿದ್ದಾರೆ. 60 ರ ದಶಕದಲ್ಲಿ ಬಹಳ ಜನಪ್ರಿಯವಾಗಿದ್ದ ’ಜನಪ್ರಗತಿ’ ಮತ್ತು ಮಲ್ಲಿಗೆಯ ಸಂಪಾದಕರಾಗಿ ಸಾಕಷ್ಟು ಹೊಸ ಬರಹಗಾರರ ರಚನೆಗೆ ಪ್ರೇರೇಪಣೆ ನೀಡಿದರು. 

ನಾಡಿಗೇರ ಕೃಷ್ಣರಾವ್ ಜೀವನ  ಸಾಧನೆಯ ಕುರಿತು ಹೊಸ ತಲೆಮಾರಿನವರಿಗೆ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಆಶಯದಿಂದ  ಈ ಪುಸ್ತಕವನ್ನು ಹೊರತರಲಾಗಿದೆ. 

 

About the Author

ಪ್ರತಿಭಾ ನಾಡಿಗೇರ

ಪ್ರತಿಭಾ ನಾಡಿಗೇರ್ - ಶಿವಮೊಗ್ಗದಲ್ಲಿ ಹುಟ್ಟಿ, ಮುಂಬೈನಲ್ಲಿ ಬೆಳೆದು, ದುಬೈನಲ್ಲಿ 23 ವರ್ಷಗಳ ಕಾಲ ಶಿಕ್ಷಣ ಹಾಗೂ ಪತ್ರಿಕೋದ್ಯಮದ ಕ್ಷೇತ್ರದಲ್ಲಿ ದುಡಿದು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮುಂಬೈನ ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದು, ಯು.ಎ.ಇ. (The Indian High School, Dubai) ನ ಪೂರ್ವ ಪದವಿ ವಿಭಾಗದಲ್ಲಿ 13 ವರ್ಷ ಕೆಲಸ ಮಾಡಿ ಅಲ್ಲಿ ಎರಡು ಸಾರಿ Best Teacher ಪ್ರಶಸ್ತಿಯನ್ನು ಪಡೆದಿದ್ದಾರೆ. 2000 ದಲ್ಲಿ ದುಬೈನ Khaleej Tirnes ಸೇರಿ, ನೂರಾರು ಲೇಖನಗಳನ್ನು ಬರೆದಿದ್ದಾರೆ. ಇವರು ಸಂದರ್ಶಿಸಿದ ವ್ಯಕ್ತಿಗಳಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ರಾಷ್ಟ್ರಪತಿ, ಎಫ್. ...

READ MORE

Related Books