ಯಮುನಾಮೂರ್ತಿ

Author : ಭಾರ್ಗವಿ ನಾರಾಯಣ

Pages 84

₹ 60.00




Year of Publication: 2014
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಯಮುನಾಮೂರ್ತಿ ಅವರು  ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದವರು. ’ಮಾಯಾ’ ಇವರು ಅಭಿನಯಿಸಿದ ಮೊದಲ ನಾಟಕ . 150ಕ್ಕೂ ಹೆಚ್ಚು ಬಾರಿ ಪ್ರದರ್ಶನ ಕಂಡ ’ಬಹದ್ದೂರ್ ಗಂಡ’ ನಾಟಕದಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದಾರೆ. ಧಾರವಾಡ ಮತ್ತು ಬೆಂಗಳೂರು ಆಕಾಶವಾಣಿ ನಿಲಯಗಳಲ್ಲಿ ನಾಟಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ.  ’ದಲಿದ ದುಂದುಭಿ, ಅಪೂರ್ಣ ರಾಮಾಯಣ, ನಿಸರ್ಗ ನಿನಾದ’ ಮೊದಲಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. 1991 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅವರ ಬಣ್ಣದ ಬದುಕನ್ನು ಪರಿಚಯಿಸುವ ಯತ್ನ ಈ ಕೃತಿ.

About the Author

ಭಾರ್ಗವಿ ನಾರಾಯಣ
(04 February 1938 - 14 February 2022)

ಭಾರ್ಗವಿ ನಾರಾಯಣ ಅವರು ಇಂಗ್ಲಿಷ್ ಎಂ.ಎ. ಪದವಿ ಪಡೆದವರು.  ಇ.ಎಸ್.ಐ, ಕಾರ್ಪೋರೇಷನ್‌ನಲ್ಲಿ ವ್ಯವಸ್ಥಾಪಕರಾಗಿ 31  ವರ್ಷಗಳ  ಕಾಲ  ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಬಾಲಕಲಾವಿದೆಯಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಇವರು ಕಿರುತೆರೆ-ಹಿರಿತೆರೆಗಳಲ್ಲಿಯೂ ತಮ್ಮ ಮನೋಜ್ಞ ಅಭಿನಯವನ್ನು ಪ್ರದರ್ಶಿಸಿದ್ದಾರೆ. ಹಲವಾರು ನಾಟಕಗಳನ್ನು ತಾವೇ ರಚಿಸಿ ಆಕಾಶವಾಣಿಗೆ ನಿರ್ದೇಶನವನ್ನು ಸಹ ಮಾಡಿದ್ದಾರೆ. ಇವರು ಸಹಕಲಾವಿದರಾಗಿ ಅಭಿನಯಿಸಿರುವ ಪ್ರೊ. ಹುಚ್ಚುರಾಯ ಸಿನಿಮಾದ ಅಭಿನಯಕ್ಕೆ 1974 ರಲ್ಲಿ ಅತ್ಯುತ್ತಮ ಪೋಷಕ ನಟಿ ರಾಜ್ಯಪ್ರಶಸ್ತಿ ಸಂದಿದೆ. ಹವ್ಯಾಸಿ ಬರಹಗಾರರಾಗಿರುವ ಇವರು  1998 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯು ಲಭಿಸಿದೆ. 'ಕವಲೊಡೆದ ದಾರಿ' ಭಾಗ-2  ಧಾರಾವಾಹಿಗೆ ಅವರು ರಚಿಸಿದ ಕತೆ ...

READ MORE

Related Books