ಜಾನ್‍ ಕೀಟ್ಸ್ :ನೀರ ಮೇಲೆ ನೆನಪ ಬರೆದು

Author : ರಾಜಶೇಖರ ಮಠಪತಿ (ರಾಗಂ)

Pages 200

₹ 145.00




Year of Publication: 2013
Published by: ಕಣ್ವ ಪ್ರಕಾಶನ
Address: ಕಣ್ವ ಪ್ರಕಾಶನ, ಬೆಂಗಳೂರು
Phone: 9845052481, 080 23206778

Synopsys

ಈ ಪುಸ್ತಕವು ಜಾನ್‍ ಕೀಟ್ಸ್ ಎಂಬ ಇಂಗ್ಲೀಷ್‍ ಕವಿಯ ಕುರಿತು ಬರೆಯಲಾದ ಜೀವನ ಚರಿತ್ರೆ. ಕೇವಲ 26 ವರ್ಷಗಳ ಕಾಲ ಬದುಕಿದ್ದ ಕೀಟ್ಸ್ ಆಂಗ್ಲ ಸಾಹಿತ್ಯ ರಂಗದಲ್ಲಿ ಸಾಕಷ್ಟು ಮನೆಮಾತಾಗಿದ್ದರು. 1795ರಲ್ಲಿ ಹುಟ್ಟಿ 1821ರಲ್ಲಿ ಮರಣಹೊಂದಿದ ಕೀಟ್ಸ್ ಕಾವ್ಯದೊಂದಿಗಿನ ಪಯಣ ಈ ಪುಸ್ತಕ. ಇದು ಜೀವನ ಚರಿತ್ರೆ ಎಂದು ಹೇಳುವುದಕ್ಕಿಂತ ಕಾವ್ಯದೊಂದಿಗಿನ ಭಾವನಾತ್ಮಕ ಪಯಣವೆಂದು ಬಣ್ಣಿಸಬಹುದು. ಪುಸ್ತಕವು ಗದ್ಯ ಮತ್ತು ಪದ್ಯಗಳ ನಡುವಿನ ಅಂತರವನ್ನು ಇಲ್ಲವಾಗಿಸುವಲ್ಲಿ ಈ ಪುಸ್ತಕದ ನಿರೂಪಣೆ ಪ್ರಮುಖ ಪಾತ್ರ ವಹಿಸುತ್ತದೆ. ತಮ್ಮದೇ ಆದ ಬರೆವಣಿಗೆಯ ಶೈಲಿಯಿಂದ ಎಲ್ಲರನ್ನೂ ಕಾಡಿದ ಯಾವ ಬರಹಗಾರನೂ ಕೂಟ ಪದ್ಯ-ಗದ್ಯಗಳ ಮಾನದಂಡವನ್ನು ಇಟ್ಟುಕೊಂಡಿಲ್ಲ ಎಂಬುದು ಲೇಖಕರ ಅಂಬೋಣ. ಇದೇ ಧಾಟಿಯಲ್ಲಿ ಸಾಗಿತ್ತದೆ ಈ ಪುಸ್ತಕದಲ್ಲಿನ ಬರಹಗಳು. ಕೀಟ್ಸ್‍ ಬರೆದ ಪತ್ರಗಳು ಆತನ ಗ್ರಂಥಗಳು ಈ ಪುಸ್ತಕದ ಮೂಲ ಆಕರಗಳು. ಕೀಟ್ಸ್ ಕುರಿತಾದ ಹಲವು ಜೀವನ ಚರಿತ್ರೆಯ ಪುಸ್ತಕಗಳು ಈವರೆಗೆ ಪ್ರಕಟವಾಗಿವೆ. ಕೆಲವು ಹೆಸರಾಂತ ಆಂಗ್ಲ ಲೇಖಕರು ಕೂಡ ಈ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಅವನು ಬರೆದಂತಹ ಪತ್ರಗಳ ವಿಶ್ಲೇಷಣೇ ಮಾಡಿದವರ ಸಂಖ್ಯೆ ಬಹಳ ವಿರಳ. ಇಂತಹ ವಿರಳ ಅಂಶಗಳನ್ನೊಳಗೊಂಡ ಪುಸ್ತಕ ‘ಜಾನ್‍ ಕೀಟ್ಸ್: ನೀರ ಮೇಲೆ ನೆನಪ ಬರೆದು’.

About the Author

ರಾಜಶೇಖರ ಮಠಪತಿ (ರಾಗಂ)

ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ  ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...

READ MORE

Related Books