ಸಂಶೋಧಕ ಕಪಟರಾಳ ಕೃಷ್ಣರಾವ್

Author : ಸ್ವಾಮಿರಾವ್ ಕುಲಕರ್ಣಿ

Pages 72

₹ 35.00




Year of Publication: 2009
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯಬೀದಿ, ಗುಲಬರ್ಗಾ- 585101
Phone: 9449825431

Synopsys

‘ಸಂಶೋಧಕ ಕಪಟರಾಳ ಕೃಷ್ಣರಾವ್’ ನಾಡಿನ ಸಂಶೋಧನೆ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದು, ಅವರ ಜೀವನ ಚಿತ್ರಣವೇ ಈ ಕೃತಿ. ಸ್ವಂತ ಬದುಕಿನ ಬಯಕೆಗಳನ್ನು ಬದಿಗಿಟ್ಟು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಬಲ ತುಂಬಿದವರು, ಸೌಲಭ್ಯ, ಅವಕಾಶ, ಪ್ರೋತ್ಸಾಹಗಳ ಕೊರತೆಯ ಸಂದರ್ಭದಲ್ಲಿಯೂ ಕನ್ನಡಕ್ಕೆ ಕಳೆ ತರುವ ಕಾರ್ಯ ಮಾಡಿದವರು.

ಲೇಖಕರಾಗಿ, ಸಂಶೋಧಕರಾಗಿ, ಕನ್ನಡ ಭಾಷಾ ಸಂರಕ್ಷಕರು, ಪೋಷಕರಾಗಿ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಪ್ರಚಾರಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಹೈದ್ರಾಬಾದ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಹೋರಾಟಗಾರರಾಗಿ, ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಹೋರಾಟಗಾರರಾಗಿ, ಖಾದಿ ಪ್ರಿಯರಾಗಿ, ಸರಳ ಬದುಕಿನ ಸಂಕೇತವಾಗಿ ಕ್ರಿಯಾಶೀಲ ಸಂಘಟಕರಾಗಿ- ಹೀಗೆ ಕಪಟರಾಳರ ಸಾಧನೆಗಳಿಗೆ ಬಹುಮುಖವಿದೆ.

ಸಾಮಾನ್ಯ ವ್ಯಕ್ತಿಯೊಬ್ಬ ಸತತ ಅಧ್ಯಯನ, ಪ್ರಯತ್ನ, ಪರಿಶ್ರಮಗಳಿಂದ ಏನನ್ನು ಸಾಧಿಸಬಹುದು ಎಂಬುದಕ್ಕೆ ಕಪಟರಾಳ ಕೃಷ್ಣರಾಯರ ಬದುಕೊಂದು ಮಾದರಿ. ಇಂತಹ ಅಪರೂಪದ ಸಾಧಕರ, ಬದುಕು ಮತ್ತು ಸಾಧನೆಯ ದಾಖಲೆಯೇ ಈ ಕಿರು ಪುಸ್ತಕ

 

About the Author

ಸ್ವಾಮಿರಾವ್ ಕುಲಕರ್ಣಿ

ಶಿರಪುರ ಪ್ರಕಾಶನದ ಪ್ರಕಾಶಕರು ಹಾಗೂ ಲೇಖಕರು ಆಗಿರುವ ಸ್ವಾಮಿರಾವ ಕುಲಕರ್ಣಿ ಅವರು ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಪದವಿ ಹಾಗೂ ದಾಸ ಸಾಹಿತ್ಯ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಸುಮಾರು 19 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಗೋನವಾರದ ರಾಮದಾಸರು, ಹಳ್ಳಿಯಿಂದ ದಿಲ್ಲಿಗೆ, ಕಳದೈತೋ ಪ್ರೀತಿ ಕಳದೈತಿ, ರಂಗ ನಾಟಕಗಳ ರಸಪ್ರಸಂಗಗಳು, ಬಾನಂಗಳದಿಂದ, ದಾಸ ದರ್ಶನ, ಹುಟ್ಟಿ ಬೆಳೆದಾ ಹಳ್ಳಿ, ಪುರಂದರದಾಸರು, ಮಂಥನ, ಮಂತ್ರಾಲಯದ ರಾಘವೇಂದ್ರರು ಮುಂತಾದವು ಇವರ ...

READ MORE

Related Books