ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆ

Author : ಎಚ್.ಎಸ್. ಅನುಪಮಾ

Pages 80

₹ 60.00




Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844/ 9480211320

Synopsys

ಕೆಳವರ್ಗದ ಮಹಿಳೆಯರು ಜಾತಿ ಶೋಷಣೆಯ ಜೊತೆಗೆ ಲಿಂಗ ಅಸಮಾನತೆಯನ್ನು ಎದುರಿಸುತ್ತಲೇ ಬಂದವರು. ಸಾವಿತ್ರಿ ಬಾಯಿ ಅವರು ಜೀವಿಸಿದ ಸಾಮಾಜಿಕ ಸಂದರ್ಭದಲ್ಲಂತೂ ಮಹಿಳೆಗೆ ಸಾಕಷ್ಟು ಅಂಕುಶಗಳಿದ್ದವು. ಅದನ್ನೆಲ್ಲಾ ಮೀರಿ ಆಕೆ ಭಾರತದ ಮೊಟ್ಟಮೊದಲ ಶಿಕ್ಷಕಿ, ಆಧುನಿಕ ಶಿ‌ಕ್ಷಣದ ತಾಯಿಯಾಗಿದ್ದು ಒಂದು ಕೌತುಕದ ಸಂಗತಿ. ಸಾವಿತ್ರಿ ಅವರ ಬಗ್ಗೆ ಮಾತನಾಡುವುದು ಎಂದರೆ ಅವರ ಸುತ್ತಲೂ ಇದ್ದ ಸಮಾಜ, ವ್ಯವಸ್ಥೆಯ ಕುರಿತು ಮಾತನಾಡುವುದು ಎಂತಲೇ ಅರ್ಥ. ಎಷ್ಟೆಲ್ಲಾ ಮಿತಿಗಳ ನಡುವೆಯೂ ಆಕೆ ಬಾಲಕಿಯರಿಗೆಂದೇ ಪ್ರತ್ಯೇಕ ಶಾಲೆ ತೆರೆಯುತ್ತಾರೆ. ಪತಿ ಜ್ಯೋತಿಬಾ ಪುಲೆ ಅವರೊಂದಿಗೆ ಸೇರಿ ಜಾತಿಮತದ ಹೊಟ್ಟ ತೂರಲು ಯತ್ನಸಿದ್ದು ಒಂದು ರೀತಿ ರೋಚಕ ಕಥನದಂತೆಯೇ ಇದೆ. 

ಸಾಮಾಜಿಕ ಕಳಕಳಿಯನ್ನೇ ತಮ್ಮ ಬರಹದ ಭಾಗವನ್ನಾಗಿಸಿಕೊಂಡಿರುವ ಡಾ. ಎಚ್‌.ಎಸ್. ಅನುಪಮಾ ಕೃತಿಯನ್ನು ಬರೆದಿರುವುದು ಅದರ ಮೆರುಗು ಇನ್ನಷ್ಟು ಹೆಚ್ಚಲು ಕಾರಣವಾಗಿದೆ. 

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Related Books