ಅದ್ವೈತ- ಅನುಸಂಧಾನಂ

Author : ಎಸ್‌.ಎಲ್‌. ಎನ್‌. ಸ್ವಾಮಿ

Pages 96

₹ 80.00




Year of Publication: 2017
Published by: ರವೀಂದ್ರ ಪುಸ್ತಕಾಲಯ
Address: ರವೀಂದ್ರ ಪುಸ್ತಕಾಲಯ, ಚಾಮರಾಜಪೇಟೆ, ಸಾಗರ ೫೭೭೪೦೧, ಶಿವಮೊಗ್ಗ ಜಿಲ್ಲೆ, ಕರ್ನಾಟಕ
Phone: 8183228616

Synopsys

ಕೈಲಾಸದಲ್ಲಿ ಸಾಕ್ಷಾತ್ ಶಿವನೇ ಶಂಕರರಾಗಿ ಅವತರಿಸಲು ಸಂಕಲ್ಪಿಸಿದ್ದು ನಾಟಕದ ಆರಂಭ ಬಿಂದು ಮತ್ತು ಶಂಕರರ ಮಹಾನ್ ಜೀವಿತವನ್ನು ಯಾವ ನೆಲೆಯಲ್ಲಿ ಸ್ವಾಮಿಯವರು ರಚಿಸುತ್ತಿರುವರು ಎಂಬುದಕ್ಕೆ ಸೂಚನೆಯೂ ಆಗಿದೆ. ನಿರೂಪಣೆಗೆ ಸ್ವಾಮಿಯವರು ಬಳಸುವ ಭಾಷೆ ಕಾವ್ಯಮಯವಾಗಿದೆ. ವಸ್ತುವಿಗೆ ತಕ್ಕ ಓಜಸ್ಸು ಕಾವ್ಯಾತ್ಮಕವಾದ ಆ ಭಾಷೆಯಲ್ಲಿ ಕಂಡುಬರುತ್ತಾ ಇದೆ. ಮುಂದೆ ಹಂತಹಂತವಾಗಿ ಶಂಕರರ ಜೀವಿತದ ಬಹು ಮುಖ್ಯ ಘಟನೆಗಳು, ಒಂದು ಜೀವಿತದಲ್ಲಿ ಸಾಧಿಸುವುದು ಅಶಕ್ಯವೆಂಬಂತೆ ಕಾಣುವ ಅವರ ಮಹತ್ಸಾಧನೆಗಳು ನಿರೂಪಿತವಾಗಿವೆ. ಈ ವಿಷಯದಲ್ಲಿ ಸ್ವಾಮಿಯವರ ಕೃತಿಯು ತನ್ನ ಉದ್ದೇಶವನ್ನು ಸಾಧಿಸಿದೆ ಎಂದು ಎಚ್‌. ಎಸ್‌. ವೆಂಕಟೇಶಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಎಸ್‌.ಎಲ್‌. ಎನ್‌. ಸ್ವಾಮಿ

ಎಸ್‌.ಎಲ್‌. ಎನ್‌. ಸ್ವಾಮಿ ಮೂಲತಃ ಚಾಮರಾಜನಗರದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮೊ ಕೋರ್ಸ್ ಪಡೆದಿದ್ದಾರೆ. ಉದಯ ಟಿವಿ, ಜೀ ಕನ್ನಡ,ಈ ಟಿವಿಯಲ್ಲಿ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಯಲಹಂಕದ 'ರಂಗಸ್ಥಳ' ರಂಗಶಿಕ್ಷಣ ಕೇಂದ್ರದಲ್ಲಿ ಯೋಜನಾ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಅಧ್ವೆತ ಅನುಸಂಧಾನಂ, ಪುರುಷೋತ್ತಮ ಪರ್ವ, ಯಲಹಂಕ ಕ್ಷೇತ್ರ ದರ್ಶಿನಿ, ...

READ MORE

Related Books